ರಸ್ತೆಯಲ್ಲಿ ವೀಲ್ಹಿಂಗ್ ಪ್ರಕರಣ: ಅಪ್ರಾಪ್ತ ಬಾಲಕನ ತಂದೆಯ ವಿರುದ್ಧ ಕೇಸ್ - Mahanayaka

ರಸ್ತೆಯಲ್ಲಿ ವೀಲ್ಹಿಂಗ್ ಪ್ರಕರಣ: ಅಪ್ರಾಪ್ತ ಬಾಲಕನ ತಂದೆಯ ವಿರುದ್ಧ ಕೇಸ್

chikkamagaluru
16/07/2025


Provided by

ಚಿಕ್ಕಮಗಳೂರು: ಎಸ್.ಪಿ, ಡಿ.ಸಿ ಕಚೇರಿ ಸಮೀಪವೇ ವೀಲ್ಹಿಂಗ್ ಮಾಡಿರುವ ವಿಚಾರವಾಗಿ ಮಹಾನಾಯಕ ವರದಿ ಮಾಡಿದ ಬೆನ್ನಲ್ಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ.

ಸೋಮವಾರ ಸಂಜೆ ನಗರದ ಫಾರೆಸ್ಟ್ ಗೇಟ್ ಬಳಿ ಎಸ್.ಪಿ, ಡಿ.ಸಿ ಕಚೇರಿ ಸಮೀಪವೇ ವೀಲ್ಹಿಂಗ್ ಮಾಡಿರುವ ಬಗ್ಗೆ ಮಹಾನಾಯಕ ವರದಿ ಮಾಡಿತ್ತು.  ಇದರ ಬೆನ್ನಲ್ಲೇ ವೈರಲ್ ವಿಡಿಯೋವನ್ನು ಆಧರಿಸಿ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಬೈಕ್ ವೀಲ್ಹಿಂಗ್ ಮಾಡಿರುವುದು ಯಾಸಿನ್ ಎಂಬ ಅಪ್ರಾಪ್ತ ವಯಸ್ಸಿನ ಬಾಲಕನಾಗಿದ್ದು,  ಹೀಗಾಗಿ ಬಾಲಕ ಯಾಸಿನ್ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರ್‌ ಸಿ ಮಾಲಿಕ ತಂದೆ ಮೇಲೆ ಕೇಸ್ ದಾಖಲಿಸಲಾಗಿದೆ. ಜೊತೆಗೆ ಹಿಂಬದಿ ಸವಾರನ ಮೇಲೂ ಕೇಸ್ ದಾಖಲಿಸಲಾಗಿದೆ.

ಸೋಮವಾರ ಸಂಜೆ ನಗರದ ಫಾರೆಸ್ಟ್ ಗೇಟ್ ಬಳಿ ಯಾರ ಭಯವೂ ಇಲ್ಲದೇ ನಡು ರಸ್ತೆಯಲ್ಲೇ ಬೈಕ್ ವೀಲ್ಹಿಂಗ್ ಮಾಡಲಾಗಿತ್ತು. ಇದು ರಸ್ತೆ ಸುರಕ್ಷತೆಗೆ ಧಕ್ಕೆ ತರುವಂತಿತ್ತು. ಇದೀಗ ಅಪ್ರಾಪ್ತ ವಯಸ್ಸಿನ ಮಗ ಮಾಡಿದ ತಪ್ಪಿಗೆ ತಂದೆಯೇ ಹೊಣೆ ಹೋರುವಂತಾಗಿದೆ. ಇನ್ನಾದರೂ  ಅಪ್ರಾಪ್ತ ಬಾಲಕರಿಗೆ ಬೈಕ್ ನೀಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ