ಫೇಕ್ ಡಾಕ್ಟರ್: ಖಾಸಗಿ ಕ್ಲಿನಿಕ್ ಗೆ ಬೀಗ ಜಡಿದ ಪೊಲೀಸರು!

ಚಿಕ್ಕಮಗಳೂರು: ನಕಲಿ ವೈದ್ಯ ಎನ್ನಲಾಗಿರುವ ವ್ಯಕ್ತಿಯೊಬ್ಬರ ಖಾಸಗಿ ಕ್ಲಿನಿಕ್ ಗೆ ಅಧಿಕಾರಿಗಳು ಬೀಗ ಜಡಿದಿರುವ ಘಟನೆ ಕಳಸ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ನಡೆದಿದೆ.
ಸ್ಪಂದನ ಕ್ಲಿನಿಕ್ ಹೆಸರಿನಲ್ಲಿ, ಎಂ.ಬಿ.ಬಿ.ಎಸ್. ಡಾಕ್ಟರ್ ಎಂದು ಹೇಳಿ ಫೇಕ್ ಡಾಕ್ಟರ್ ಚಿಕಿತ್ಸೆ ನೀಡುತ್ತಿದ್ದ ಆರೋಪದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆದಿದ್ದು, ದಾಳಿ ನಡೆಸಿದ ವೇಳೆ ನಕಲಿ ವೈದ್ಯನ ಮುಖವಾಡ ಬೆಳಕಿಗೆ ಬಂದಿದೆ.
ಸ್ಪಂದನ ಕ್ಲಿನಿಕ್ ಹೆಸರಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ಫೇಕ್ ಡಾಕ್ಟರ್ ಬಗ್ಗೆ ಅನುಮಾನ ಬಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.
ಮೂಡಿಗೆರೆ ವೈದ್ಯಾಧಿಕಾರಿ ಹರೀಶ್ ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿ ವೇಳೆ ಯಾವುದೇ ದಾಖಲೆಗಳು ನೀಡದ ಹಿನ್ನೆಲೆ ಕ್ಲಿನಿಕ್ ಗೆ ಬೀಗ ಜಡಿಯಲಾಯಿತು. ತಾಲೂಕು ವೈದ್ಯಾಧಿಕಾರಿ, ಪೊಲೀಸ್, ಪಿಡಿಓ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD