ಧರ್ಮಸ್ಥಳ ಪ್ರಕರಣದ ತನಿಖೆ ಹೈಕೋರ್ಟ್ ಮೇಲ್ವಿಚಾರಣೆ ಮಾಡಲಿ: ಬೆಂಗಳೂರು ವಕೀಲರಿಂದ ಪತ್ರ

ಬೆಂಗಳೂರು: ಧರ್ಮಸ್ಥಳ ಸುತ್ತಮುತ್ತ ನೂರಾರು ಅತ್ಯಾಚಾರ, ಸರಣಿ ಹತ್ಯೆ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಲಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ವಕೀಲರ ತಂಡ ಹೈಕೋರ್ಟ್ ರಿಜಿಸ್ಟರ್ ಗೆ ಪತ್ರ ಬರೆದಿದ್ದು, ವಿಶೇಷ ಮನವಿ ಸಲ್ಲಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಪ್ರಾಣ ಬೆದರಿಕೆಯ ಕಾರಣ ತಾನೇ ಮಣ್ಣು ಮಾಡಿರುವುದಾಗಿ ಓರ್ವ ವ್ಯಕ್ತಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದ ಈ ಪ್ರಕರಣವನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡುವಂತೆ ಹಾಗೂ ಹೈಕೋರ್ಟ್ ಮೂಲಕ ಪಾರದರ್ಶಕ ತನಿಖೆ ಮಾಡುವಂತೆ ಬೆಂಗಳೂರಿನ ವಕೀಲರಿಂದ ಹೈಕೋರ್ಟ್ ರಿಜಿಸ್ಟರ್‌ಗೆ ಪತ್ರ ಬರೆಯಲಾಗಿದೆ.
ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆಯಾಗಲು ಹೈಕೋರ್ಟ್ ಮೇಲ್ವಿಚಾರಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಆದ್ರೆ, ರಾಜ್ಯ ಸರ್ಕಾರ ಈಗಾಗಲೇ ಎಸ್ ಐಟಿ ತನಿಖೆಗೆ ಆದೇಶಿಸಿದೆ. ಧರ್ಮಸ್ಥಳ ಪ್ರಕರಣ ಕುರಿತು ತನಿಖೆಗೆ ಸರ್ಕಾರ SIT ರಚಿಸಿದೆ. ಈ ಹಿನ್ನೆಲೆ ಗೃಹ ಸಚಿವರ ಭೇಟಿಗೆ ಆಗಮಿಸಿದ ಪ್ರಣವ್ ಮೊಹಂತಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು.
ಚರ್ಚೆ ಬಳಿಕ ಮಾತಾಡಿದ ಗೃಹ ಸಚಿವ ಪರಮೇಶ್ವರ್ ಅವ್ರು, ಎಸ್ ಐಟಿ ರಚಿಸಿ ಆಫೀಸರ್ ಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರೆಲ್ಲಾ ಜವಾಬ್ದಾರಿ ಸ್ಥಾನದಲ್ಲಿರೋ ಹಿರಿಯ ಅಧಿಕಾರಿಗಳು ಅವರವರ ಜವಾಬ್ದಾರಿಯನ್ನ ನಿಭಾಯಿಸ್ತಾರೆ. ಯಾರೂ ಹಿಂದೆ ಸರಿಯುವ ಬಗ್ಗೆ ಮಾತಾಡಿಲ್ಲ. ನನಗಾಗಲಿ ಸರ್ಕಾರಕ್ಕೆ ಆಗಲಿ ಆ ಬಗ್ಗೆ ಏನೂ ಹೇಳಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD