ಐರ್ಲೆಂಡ್‌ ನಲ್ಲಿ ಭಾರತೀಯ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ! - Mahanayaka
2:07 AM Saturday 18 - October 2025

ಐರ್ಲೆಂಡ್‌ ನಲ್ಲಿ ಭಾರತೀಯ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ!

indian man attacked
23/07/2025

ಡಬ್ಲಿನ್‌: ಐರಿಶ್ ರಾಜಧಾನಿ ಡಬ್ಲಿನ್‌ ನಲ್ಲಿ 40 ರ ಹರೆಯದ ಭಾರತೀಯ ವ್ಯಕ್ತಿಯ ಮೇಲೆ ದಾಳಿಕೋರರ ಗುಂಪೊಂದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.


Provided by

ಹೆಸರು ಬಹಿರಂಗಪಡಿಸದ ಭಾರತೀಯ ಪ್ರಜೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮಕ್ಕಳ  ಜೊತೆಗೆ ಅನುಚಿತವಾಗಿ ವರ್ತನೆ ತೋರಿರುವುದಾಗಿ ಆರೋಪಿಸಿ ಹಲ್ಲೆ ನಡೆಸಲಾಗಿದೆ. ಆದರೆ ಇದು ಜನಾಂಗೀಯ ದ್ವೇಷದ ಹಲ್ಲೆ ಎಂದು ದಿ ಐರಿಶ್ ಟೈಮ್ಸ್ ವರದಿ ಮಾಡಿದೆ.

ಜುಲೈ 19 ರಂದು ಸಂಜೆ ಟಾಲಾಗ್ಟ್ ಉಪನಗರದಲ್ಲಿ ಯುವಕರ ಗುಂಪೊಂದು ಭಾರತೀಯ ಪ್ರಜೆಯ ಮೇಲೆ ದಾಳಿ ಮಾಡಿ ಥಳಿಸಿತು. ಹಲ್ಲೆ ನಡೆಸುವ ವೇಳೆ ದಾಳಿಕೋರರು ಆತನ ಪ್ಯಾಂಟ್ ತೆಗೆದು ವಿವಸ್ತ್ರಗೊಳಿಸಿದರು. ಆತನ ಮುಖ, ತೋಳು ಮತ್ತು ಕಾಲುಗಳಿಗೆ ತೀವ್ರವಾದ ಏಟು ಬಿದ್ದಿದ್ದು, ಪರಿಣಾಮವಾಗಿ ರಕ್ತ ಸ್ರಾವವಾಗಿತ್ತು.

ಐರಿಶ್ ರಾಷ್ಟ್ರೀಯ ಪೊಲೀಸರ ಪ್ರಕಾರ, ದಾಳಿ ಕೋರರು ವ್ಯಕ್ತಿ ಮಕ್ಕಳ ಬಳಿ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಸುಳ್ಳು ಆರೋಪ ಮಾಡಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ. ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿರುವುದು ಸುಳ್ಳು ಆರೋಪ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಟಾಲಾಗ್ಟ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜು.20ರಂದು ಆಸ್ಪತ್ರೆಯಿಂದ ಬಿಡುಗಡೆಗಡೆ ಮಾಡಲಾಗಿದೆ. ದಾಳಿ ನಡೆಸಿದವರ ಪೈಕಿ ಕೆಲವರು ಇತ್ತೀಚೆಗೆ ಟಾಲಾಗ್ಟ್ ಪ್ರದೇಶದಲ್ಲಿಯೂ ವಿದೇಶಿಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶಾಮೀಲಾಗಿದ್ದರು. ವಿದೇಶಿಯರ ಮೇಲೆ ಈ ಗುಂಪು ಅಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ