ಸರ್ಕಾರ ಸಾರಿಗೆ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ | ಸ್ಟಾರ್ ನಟ ಚೇತನ್ ಆಕ್ರೋಶ - Mahanayaka

ಸರ್ಕಾರ ಸಾರಿಗೆ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ | ಸ್ಟಾರ್ ನಟ ಚೇತನ್ ಆಕ್ರೋಶ

chethan
13/04/2021

ಧಾರವಾಡ: ಸಾರಿಗೆ ನೌಕರರ 6ನೇ ವೇತನ ಜಾರಿ ಸೇರಿದಂತೆ ಅವರ ಇತರ ಬೇಡಿಕೆಗಳು ನ್ಯಾಯಯುತವಾಗಿದೆ. ಸರ್ಕಾರ ಬೇಡಿಕೆ ಈಡೇರಿಸುವುದು ಬಿಟ್ಟು ಎಸ್ಮಾ ಜಾರಿ ಮಾಡಿ ಕೆಲಸದಿಂದ ವಜಾ ಸೇರಿದಂತೆ ವಿವಿಧ ರೀತಿಯಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಸ್ಟಾರ್ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಸಂಬಂಧ  ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಇದೀಗ ಸರ್ಕಾರ ಮಾತು ತಪ್ಪಿದೆ. 2016 ರಿಂದ 9 ಬೇಡಿಕೆಗೆ ಸಾರಿಗೆ ನೌಕರರು ಒತ್ತಾಯಿಸಿದ್ದರು. ಆದ್ರೆ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ವಿಭಾಗದ ಸಾರಿಗೆ ಸಿಬ್ಬಂದಿ ಆತ್ಮಹತ್ಯೆಗೆ ಸರ್ಕಾರವೇ ಹೊಣೆ. ಇದೊಂದು ವ್ಯವಸ್ಥಿತ ಕೊಲೆ. ಆತನ ಪತ್ನಿ ಹಾಗೂ ಮೂವರು ಮಕ್ಕಳಿಗೆ ಸಾಂತ್ವನ ಹೇಳಿದೆ. ಅಲ್ಲದೇ, ಅವರ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನೌಕರರ ಮೇಲೆ ಸರ್ಕಾರದ ದೌರ್ಜನ್ಯ ಹೆಚ್ಚಿದೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಚಿವರ ತವರಿನಲ್ಲೂ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡರೂ ಸ್ಪಂದಿಸದಿರುವುದು ಅತ್ಯಂತ ನಾಚಿಕೆಗೇಡು. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಎಂಬ ಸಚಿವರ ಹೇಳಿಕೆ ಅವರ ಬೇಜಾವಾಬ್ದಾರಿ ತನವನ್ನು ತೋರಿಸುತ್ತದೆ ಎಂದು ಸಚಿವರ ನಡತೆಯನ್ನು ಟೀಕಿಸಿದರು.

ಇತ್ತೀಚಿನ ಸುದ್ದಿ