ಪೋಷಕರು ಬೈದರು ಎಂದು ಮನೆಬಿಟ್ಟು ಹೋಗಿದ್ದ ಅಕ್ಕ ತಂಗಿ ಪುಣೆಯಲ್ಲಿ ಪತ್ತೆ! - Mahanayaka

ಪೋಷಕರು ಬೈದರು ಎಂದು ಮನೆಬಿಟ್ಟು ಹೋಗಿದ್ದ ಅಕ್ಕ ತಂಗಿ ಪುಣೆಯಲ್ಲಿ ಪತ್ತೆ!

haveri
27/07/2025


Provided by

ಹಾವೇರಿ:  ಪೋಷಕರು ಬೈದರು ಎಂದು ನೊಂದು ಮನೆ ಬಿಟ್ಟು ಹೋಗಿದ್ದ ಅಕ್ಕ ತಂಗಿ ಇಬ್ಬರನ್ನು ಪುಣೆಯಲ್ಲಿ ಪತ್ತೆ ಹಚ್ಚಲಾಗಿದೆ.

ಹಾವೇರಿಯ ಅಬ್ದುಲ್ ಖಾದರ್ ಲೋಹಾರ್ ಪುತ್ರಿಯರಾದ ಉಮರ್ ಖೈರ್ ಫಾತಿಮಾ ಮತ್ತು ಉಮ್ಮಿ ಹಬೀಬಾ ನಾಪತ್ತೆಯಾಗಿದ್ದರು. ಈ ಸಂಬಂಧ ಹಾವೇರಿ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಹಾವೇರಿಯ ಲಯನ್ಸ್ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದ ಸಹೋದರಿಯರು, ಶನಿವಾರ ಶಾಲೆ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದರು.

ಹೀಗಾಗಿ ಪೋಷಕರು ಆತಂಕಗೊಂಡು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಮಕ್ಕಳು ಪತ್ತೆಯಾಗದ ಹಿನ್ನೆಲೆ ನಿನ್ನೆ ಹಾವೇರಿ ಮಹಿಳಾ ಠಾಣೆಯಲ್ಲಿ ಫಾತಿಮಾ ಮತ್ತು ಉಮ್ಮಿ ಹಬೀಬಾ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಅಕ್ಕ–ತಂಗಿ ಪತ್ತೆಯಾಗಿದ್ದಾರೆ ಈ ಮೂಲಕ ಪ್ರಕರಣ ಸುಖಾಂತ್ಯವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ