ಅಳಿಯ, ಮಾವನ ಜಗಳ ನಿಲ್ಲಿಸಲು ಹೋದ ಪೊಲೀಸ್ ಪೇದೆಗೆ ಚೂರಿ ಇರಿತ

ಬೆಂಗಳೂರು: ಅಳಿಯ, ಮಾವನ ಜಗಳ ನಿಲ್ಲಿಸಲು ಹೋದ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದ ಘಟನೆಯೊಂದ ಚಾಮರಾಜನಗರಪೇಟೆಯ ವಾಲ್ಮೀಕಿ ನಗರದಲ್ಲಿ ಶನಿವಾರ ನಡೆದಿದೆ.
ವರದಿಗಳ ಪ್ರಕಾರ ಅಳಿಯ ತಬ್ರೇಜ್, ಮಾವ ಮೊಹಮ್ಮದ್ ಶಫೀವುಲ್ಲಾ ಎಂಬವರ ನಡುವೆ ಗಲಾಟೆ ನಡೆದಿತ್ತು. ತಬ್ರೇಜ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದನು. ಹೀಗಾಗಿ ಶಫೀವುಲ್ಲಾ, ಮಗಳಿಗೆ ಬೇರೆ ಮದುವೆ ಮಾಡಿಸಲು ಮುಂದಾಗಿದ್ದ.
ಈ ವಿಚಾರಕ್ಕೆ ಸಂಬಂಧಿಸಿದಂತೆ ತಬ್ರೇಜ್ ಮತ್ತು ಈತನ ಸಂಬಂಧಿಕರು ಶಫೀವುಲ್ಲಾ ಜೊತೆ ಜಗಳ ನಡೆಸಿದ್ದಾರೆ. ಈ ವೇಳೆ ಅಳಿಯ ತಬ್ರೇಜ್ ಮಾವ ಶಫೀವುಲ್ಲಾಗೆ ಬಾಟಲಿಯಿಂದ ತಲೆಗೆ ಒಡೆದು ಗಲಾಟೆ ಮಾಡಿದ್ದ.
ಗಲಾಟೆಯ ಮಾಹಿತಿ ತಿಳಿದು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದು, ಈ ವೇಳೆ ತಬ್ರೇಜ್ ಡ್ರ್ಯಾಗನ್ ನಿಂದ ಪೊಲೀಸ್ ಪೇದೆ ಸಂತೋಷ್ ಗೆ ಇರಿದಿದ್ದಾರೆ. ಪರಿಣಾಮವಾಗಿ ಸಂತೋಷ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಳಿಯ ತಬ್ರೇಜ್ ವಿರುದ್ಧ ಮಾವ ಶಫೀವುಲ್ಲಾ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ತಬ್ರೇಜ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD