ಕರ್ನಾಟಕ ದಲಿತ ಸಂಘರ್ಷ ಸಮಿತಿ: ಗ್ರಾಮ ಸಮಿತಿ ಸಭೆ

ಬಜಪೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊಫೆಸರ್ ಬಿ ಕೃಷ್ಣಪ್ಪ ಬಣ) ಗ್ರಾಮ ಶಾಖೆ ಕೆಂಜಾರು–3. ಗ್ರಾಮ ಸಮಿತಿಯ ಸಭೆಯು ಜು.27ರಂದು ಗ್ರಾಮ ಸಂಚಾಲಕರಾದ ಲಿಂಗಪ್ಪ ಕುಂದರ್ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಮತ್ತು ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ನಡೆಯಿತು.

ಜಿಲ್ಲೆಯ ನೂತನ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಇವರನ್ನು ಶಾಲು ಹೊದಿಸಿ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು. ಸ್ಥಳೀಯ ಗ್ರಾಮದ ಸದಸ್ಯರು ಹಾಗೂ ತಾಲೂಕು ಸಂಚಾಲಕರಾದ ರಾಘವೇಂದ್ರರವರು ರಸ್ತೆ ಸಮಸ್ಯೆ, ಸ್ಮಶಾನದ ಸಮಸ್ಯೆ, ಅಂಬೇಡ್ಕರ್ ಭವನದ ಸಮಸ್ಯೆ ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿದರು.
ಸಭೆಯಲ್ಲಿ ಸ್ಥಳೀಯ ಗ್ರಾಮ ಶಾಖೆಯನ್ನು ಸಕ್ರಿಯಗೊಳಿಸುವ ಬಗ್ಗೆ ಹಾಗೂ ಸ್ಥಳೀಯ ಕುಂದು–ಕೊರತೆಗಳ ಚರ್ಚೆ ನಡೆಯಿತು. ಸಭೆಯಲ್ಲಿ ಸರ್ವರ ಅಭಿಪ್ರಾಯದಂತೆ ಗ್ರಾಮದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಸಂಬಂಧಿಸಿದ ಇಲಾಖೆಗೆ ಭೇಟಿ ನೀಡಿ ಒತ್ತಾಯಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ., ರಘು ಕೆ. ಎಕ್ಕಾರು, ತಾಲೂಕು ಸಮಿತಿ ಸಂಚಾಲಕರಾದ ರಾಘವೇಂದ್ರ, ಸಂಘಟನಾ ಸಂಚಾಲಕರಾದ, ರುಕ್ಕಯ್ಯ ಅಮಿನ್ ,ಕೃಷ್ಣ ಎಕ್ಕಾರು, ತಾಲೂಕು ಕಲಾ ಮಂಡಳಿ ಸಂಚಾಲಕರಾದ ಗಂಗಾಧರ್ ಕೋಟ್ಯಾನ್, ಎಕ್ಕಾರು ಗ್ರಾಮ ಶಾಖೆಯ ಸಂಘಟನಾ ಸಂಚಾಲಕ ಮೋಹನ್ ಎಕ್ಕಾರು ಉಪಸ್ಥಿತರಿದ್ದರು. ಗೋಪಾಲ ಮೂಡುಬಾಳಿಕೆ ಧನ್ಯವಾದ ಸಮರ್ಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD