ಧರ್ಮಸ್ಥಳ: ಪಾಯಿಂಟ್ 1ನಲ್ಲಿ  ಮಣ್ಣಿನ ಅಭಿವೃದ್ಧಿ ಕೆಲಸ ನಡೆದಿತ್ತು: ಸುಜಾತಾ ಭಟ್ ಪರ ವಕೀಲರ ಹೇಳಿಕೆ - Mahanayaka

ಧರ್ಮಸ್ಥಳ: ಪಾಯಿಂಟ್ 1ನಲ್ಲಿ  ಮಣ್ಣಿನ ಅಭಿವೃದ್ಧಿ ಕೆಲಸ ನಡೆದಿತ್ತು: ಸುಜಾತಾ ಭಟ್ ಪರ ವಕೀಲರ ಹೇಳಿಕೆ

dharmasthala
30/07/2025


Provided by

ಮಂಗಳೂರು: ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಈ ಹಿಂದೆ ಮಣ್ಣಿನ ಅಭಿವೃದ್ಧಿ ಕೆಲಸ ನಡೆದಿದೆ ಎಂದು ತಿಳಿದು ಬಂದಿದೆ ಎಂದು  ನಾಪತ್ತೆಯಾಗಿರುವ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್ ಎನ್. ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಜುಲೈ 28ರಂದು ಒಟ್ಟು 14 ಸ್ಥಳಗಳನ್ನು ಗುರುತಿಸಲಾಗಿದ್ದು,  ಪ್ರಾಥಮಿಕ ಹಂತದಲ್ಲಿ ಯಾವುದೇ ಶವ ಪತ್ತೆಯಾಗದೇ ಇದ್ದರೂ ತನಿಖಾ ತಂಡದ ಕ್ರಮಗಳು ವಿಶ್ವಾಸಾರ್ಹವಾಗಿದೆ. ಎಸ್ ಐಟಿ ತೋರಿದ ಸೂಕ್ಷ್ಮತೆ ಮತ್ತು ಗಂಭೀರತೆ ಗಮನಾರ್ಹವಾದದ್ದು ಎಂದು ಸುಜಾತಾ ಭಟ್ ಎಸ್ ಐಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸೈಟ್ 1ರಲ್ಲಿ ಯಾವುದೇ ಮೃತದೇಹ ಸಿಗದಿದ್ದರೂ  ಸುಜಾತಾ ಭಟ್ ನಿರಾಸೆಗೊಂಡಿಲ್ಲ, ತನಿಖೆ ಸಮರ್ಥರ ಕೈಯಲ್ಲಿದೆ ಎಂಬ ವಿಶ್ವಾಸವನ್ನು ಸುಜಾತಾ ಭಟ್ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ