ಧರ್ಮಸ್ಥಳ: 7ನೇ ಸ್ಪಾಟ್ ನಲ್ಲಿ ಸಿಕ್ಕಿತಾ ಕಳೇಬರ?, ಏನು ನಡೆಯುತ್ತಿದೆ?

ಮಂಗಳೂರು: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 7ನೇ ಸ್ಪಾಟ್ ನಲ್ಲಿ ಕಳೇಬರಕ್ಕಾಗಿ ಹುಡುಕಾಟ ನಡೆಸಲಾಯಿತು. ನಿನ್ನೆ 6ನೇ ಸ್ಪಾಟ್ ನಲ್ಲಿ ಮಾನವನ ಕಳೇಬರ ಪತ್ತೆಯಾಗಿತ್ತು.
ಇಂದು 7ನೇ ಸ್ಪಾಟ್ ನಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ ಅಂತ ಹೇಳಲಾಗುತ್ತಿದೆ. ಸುಮಾರು 6 ಅಡಿಗಳಷ್ಟು ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಅಂತ ಹೇಳಲಾಗಿದೆ. ಆದರೆ ನಿಖರವಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
7ನೇ ಸ್ಪಾಟ್ ನಲ್ಲಿ ಕಾರ್ಯಾಚರಣೆ ಮುಗಿದಿದೆ. ಇದೀಗ 8ನೇ ಸ್ಪಾಟ್ ನಲ್ಲಿ ಕಳೇಬರ ಹುಡುಕಾಟ ಆರಂಭಗೊಂಡಿದೆ. 8ನೇ ಸ್ಪಾಟ್ ಗೆ ಅಡ್ಡವಾಗಿ ಪರದೆಗಳನ್ನು ಕಟ್ಟಿ ಗುಂಡಿ ಅಗೆಯುವ ಕಾರ್ಯಕ್ಕೆ ಕಾರ್ಮಿಕರು ಸಿದ್ಧತೆ ನಡೆಸುತ್ತಿದ್ದಾರೆ.
ಅಂದ ಹಾಗೆ, ಎಸ್ ಐಟಿ ಅಧಿಕಾರಿಗಳು ಉತ್ಖನನ ಕಾರ್ಯವನ್ನು ಬಹಳ ಮುನ್ನೆಚ್ಚರಿಕೆಯಿಂದ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ನಿನ್ನೆ 6ನೇ ಸ್ಪಾಟ್ ನಲ್ಲಿ ಕಳೇಬರ ಪತ್ತೆಯಾಗಿರುವುದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಪ್ರಸಾರವಾಗ್ತಿದಂತೆಯೇ ತಕ್ಷಣವೇ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಪರದೆಕಟ್ಟಿ ಮಾಧ್ಯಮಗಳ ಕ್ಯಾಮರಾಗಳಿಗೆ ಕಾಣದಂತೆ ಕ್ರಮವಹಿಸಲಾಯಿತು.
ಮೃತದೇಹ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಸ್ಥಳೀಯ ಮಾಹಿತಿಯನ್ನು ಆಧರಿಸಿ ತಿಳಿದುಕೊಳ್ಳಬೇಕಷ್ಟೆ, ಎಸ್ ಐಟಿ ಅಧಿಕಾರಿಗಳು ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಹಾಗಾಗಿ ಮೃತದೇಹ ಸಿಕ್ತು, ಇಲ್ಲ ಎನ್ನುವುದು ಸ್ಪಷ್ಟ ಮಾಹಿತಿಯಲ್ಲ, ಎಸ್ ಐಟಿ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತನಿಖೆ ಮೇಲೆ ದಿನದಿಂದ ದಿನಕ್ಕೆ ನಂಬಿಕೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ಅಧಿಕಾರಿಗಳು ಪ್ರಕರಣದಲ್ಲಿ ತೋರಿಸುತ್ತಿರುವ ಜವಾಬ್ದಾರಿಗೆ ಅವರ ಮೇಲಿನ ಗೌರವ ಹೆಚ್ಚಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: