ಅಪರೂಪದ ಮಲಬಾರ್ ಪಿಟ್ ವೈಫರ್ ಹಾವು ಪತ್ತೆ

ಚಿಕ್ಕಮಗಳೂರು: ಉರಗ ಸಂತತಿಯಲ್ಲೇ ಅಪರೂಪದ ಉರಗ ಕಾಫಿನಾಡಲ್ಲಿ ಪತ್ತೆಯಾಗಿದೆ. ಕೇವಲ ಮೂರೇ ಮೂರು ಅಡಿಯ ಮಲಬಾರ್ ಪಿಟ್ ವೈಫರ್ ಹಾವನ್ನು ಸೆರೆ ಹಿಡಿಯಲಾಗಿದೆ.
ನೋಡಲು ಅತ್ಯಂತ ಸುಂದರವಾಗಿರೋ ಮಲಬಾರ್ ಪಿಟ್ ವೈಫರ್ ಅಪರೂಪದ ಹಾವು, ಕಳಸ ತಾಲೂಕಿನ ಬೇಡಕ್ಕಿ ಗ್ರಾಮದಲ್ಲಿ ಸೆರೆಯಾಗಿದೆ.
ಕಾಳಿಂಗ ಸರ್ಪಗಳೇ ಹೆಚ್ಚಿರೋ ಮಲೆನಾಡಲ್ಲಿ ಮಲಬಾರ್ ಪಿಟ್ ವೈಫರ್ ಅತ್ಯಾಪರೂಪವಾಗಿದೆ. ಉರಗ ಸಂತತಿಯಲ್ಲೇ ಸೂಕ್ಷ್ಮಾತಿಸೂಕ್ಷ್ಮ ಹಾವು ಈ ಮಲಬಾರ್ ಪಿಟ್ ವೈಫರ್. ಇದರ ವಿಷ ಮಾರಣಾಂತಿಕವಲ್ಲದಿದ್ದರೂ ತೀವ್ರ ನೋವು, ಊದಿಕೊಳ್ಳುತ್ತದೆ. ಸರಿಯಾದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕಚ್ಚಿದ ಜಾಗ ಗ್ಯಾಂಗ್ರಿನ್ ಆಗಿ ಕೊಳೆಯುತ್ತದೆ.
ಸದ್ಯ ಹಾವನ್ನ ಉರಗ ತಜ್ಞ ರಿಜ್ವಾನ್ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD