ವಿಚ್ಛೇದನದ ಸಂದರ್ಭದಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು: ಯಜುವೇಂದ್ರ ಚಾಹಲ್ - Mahanayaka

ವಿಚ್ಛೇದನದ ಸಂದರ್ಭದಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು: ಯಜುವೇಂದ್ರ ಚಾಹಲ್

yuzvendra chahal
01/08/2025


Provided by

ನವದೆಹಲಿ:  ಪತ್ನಿಯೊಂದಿಗೆ ವಿಚ್ಛೇದನಗೊಂಡ ಸಂದರ್ಭದಲ್ಲಿ ತಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದ್ದೆ ಎಂದು  ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಯಜುವೇಂದ್ರ ಚಾಹಲ್(Yuzvendra Chahal)  ಹಾಗೂ ಧರ್ಮಶ್ರೀ(Dhanashree Verma) ಮಾರ್ಚ್ 20ರಂದು ವಿವಾಹ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದರು. ತಮ್ಮ ಸಂಬಂಧ ಬಗ್ಗೆ  ರಾಜ್ ಶಮಾನಿ ಪಾಡ್ ಕಾಸ್ಟ್ ನೊಂದಿಗೆ ಮಾತನಾಡಿದ ಅವರು, ನಾನು ಖಿನ್ನತೆಗೊಳಗಾಗಿದ್ದೆ, ನನ್ನಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು,  ನನ್ನ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ನಾನು ನೋಡುತ್ತಿದ್ದೆ. ಹಾಗಾಗಿ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆಯಲು ಬಯಸಿದ್ದೆ, ಮನೆಯಲ್ಲಿ ಎಸಿ ಹಾಕಿದರೂ ಬೆವರುತ್ತಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ವಿವಾಹ ವಿಚ್ಛೇದನದ ಸಮಯದಲ್ಲಿ ನಮ್ಮ ಜೊತೆಗೆ ಸೌಹಾರ್ದ ಬಾಂಧವ್ಯ ಇರಲಿಲ್ಲ, ನನ್ನ ಕ್ರಿಕೆಟ್ ಜೀವನದಿಂದಾಗಿ ಪತ್ನಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗದೇ ಹೋಗಿದ್ದರಿಂದ ದಾಂಪತ್ಯದಲ್ಲಿ ಬಿರುಕು ಮೂಡಿತು ಎಂದು ಯಜುವೇಂದ್ರ ಚಾಹಲ್   ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ