ರಾಜ್ಯದ 29 ಜಿಲ್ಲೆಗಳಲ್ಲಿ 1 ವಾರ ಭಾರೀ ಮಳೆಯಾಗಲಿದೆ! - Mahanayaka
7:38 AM Tuesday 30 - September 2025

ರಾಜ್ಯದ 29 ಜಿಲ್ಲೆಗಳಲ್ಲಿ 1 ವಾರ ಭಾರೀ ಮಳೆಯಾಗಲಿದೆ!

haevy rain
05/08/2025

ಬೆಂಗಳೂರು: ಕರ್ನಾಟಕದ 29 ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Provided by

ವಿಜಯನಗರ, ಶಿವಮೊಗ್ಗ, ರಾಮನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ರಾಯಲ್ಪಾಡು, ಆಗುಂಬೆ, ಜಿಕೆವಿಕೆ, ಕೃಷ್ಣರಾಜಪೇಟೆ, ಹೊಸಕೋಟೆ, ಗೌರಿಬಿದನೂರು, ಧರ್ಮಸ್ಥಳ, ಹೆಸರಘಟ್ಟ, ಬೆಳ್ತಂಗಡಿ, ಉಡುಪಿ, ಸುಳ್ಯ, ಪುತ್ತೂರು, ಮೂಡುಬಿದಿರೆ, ಕೋಟಾ, ಕಾರ್ಕಳ, ಬೀದರ್, ಭಾಗಮಂಡಲದಲ್ಲಿ ಮಳೆಯಾಗಿದೆ.

ಬಂಟ್ವಾಳ, ಟಿಜಿ ಹಳ್ಳಿ, ನಾಪೋಕ್ಲು, ಮಾಣಿ, ಮಾಗಡಿ, ಕುಂದಾಪುರ, ಕಿಬ್ಬನಹಳ್ಳಿ, ಕಳಸ, ಗೋಪಾಲ್​​ನಗರ, ಚನ್ನರಾಯಪಟ್ಟಣ, ಭದ್ರಾವತಿ, ಬೆಂಗಳೂರು ಎಚ್​​ ಎಎಲ್​, ಉಪ್ಪಿನಂಗಡಿ, ತಿಪಟೂರು, ಸಿದ್ದಾಪುರ, ಮಂಕಿ, ಪೊನ್ನಂಪೇಟೆ, ಕುಣಿಗಲ್, ಕೊಟ್ಟಿಗೆಹಾರ, ದೇವರಹಿಪ್ಪರಗಿ, ಕ್ಯಾಸಲ್​ರಾಕ್, ಬೇಳೂರು, ಆನವಟ್ಟಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸತತ ಎರಡು ದಿನಗಳಿಂದ ಮಳೆಯಾಗುತ್ತಿದೆ. ಸೋಮವಾರ ಕೂಡ ಸಂಜೆಯೇ ಶುರುವಾದ ಮಳೆ ತಡರಾತ್ರಿವರೆಗೂ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ