ಜೇಡ ಕಡಿತದಿಂದ 7 ವರ್ಷದ ಬಾಲಕಿ ಸಾವು

ಗುವಾಹಟಿ: ಏಳು ವರ್ಷದ ಬಾಲಕಿ ಜೇಡ ಕಡಿತದಿಂದ ಸಾವನ್ನಪ್ಪಿರುವ ಘಟನೆ ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಪನಿಟೋಲಾ ಗ್ರಾಮದಲ್ಲಿ ನಡೆದಿದೆ.
ಮೊಟ್ಟೆಗಳನ್ನು ಹೊಂದಿರುವ ಬಿದಿರಿನ ಬುಟ್ಟಿಯನ್ನು ತೆರೆದಾಗ ಕಪ್ಪು ಬಣ್ಣದ ಜೇಡ ಬಾಲಕಿಯ ಕೈಗೆ ಕಚ್ಚಿತ್ತು. ಹೀಗಾಗಿ ಮಗುವಿನ ಕೈ ಊದಿಕೊಂಡಿತ್ತು. ತಕ್ಷಣವೇ ಆಕೆಯನ್ನು ಸಮೀಪದ ಔಷಧಾಲಯಕ್ಕೆ ಕರೆದೊಯ್ಯಲಾಯಿತು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತಿನ್ಸುಕಿಯಾದ ನಾಗರಿಕ ಆಸ್ಪತ್ರೆಗೆ ಕರೆದೊಯ್ಯುಲಾಯ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು.
ಸದ್ಯ ಯಾವ ಪ್ರಭೇದದ ಜೇಡ ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಪೊಲೀಸರು ಸದ್ಯಕ್ಕೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD