ಆಗಷ್ಟೇ ಜನಿಸಿದ ಮಗುವನ್ನು ‘ನಮಗೆ ಬೇಡ’ ಎಂದು ತಿರಸ್ಕರಿಸಿದ ದಂಪತಿ: ಕಾರಣ ಏನು? - Mahanayaka

ಆಗಷ್ಟೇ ಜನಿಸಿದ ಮಗುವನ್ನು ‘ನಮಗೆ ಬೇಡ’ ಎಂದು ತಿರಸ್ಕರಿಸಿದ ದಂಪತಿ: ಕಾರಣ ಏನು?

baby
08/08/2025


Provided by

ಮಂಡ್ಯ: ಆಗಷ್ಟೇ ಜನಿಸಿದ ಮಗುವನ್ನು ಪೋಷಕರು ತಮಗೆ ಬೇಡ ಎಂದು ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಬುಧವಾರ ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದರೂ, ಅವರು ಈ ಮಗುವನ್ನು ಆರೈಕೆ ಮಾಡುವ ಶಕ್ತಿ ನಮಗಿಲ್ಲ,  ಈಗಾಗಲೇ ನಮಗೆ ನಾಲ್ಕೂವರೆ ವರ್ಷದ ಗಂಡು ಮಗುವಿದೆ. ಹೀಗಾಗಿ ಈ ಮಗುವನ್ನು ಬೇರೆಯವರಿಗೆ ನೀಡುತ್ತೇವೆ ಎಂದು ವೈದ್ಯರಿಗೆ ತಿಳಿಸಿದ್ದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗುರುವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ವೈಧ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ನಂಜಮಣಿ, ದಂಪತಿಯೊಂದಿಗೆ ಮಾತುಕತೆ ನಡೆಸಿದರು.

ಮಗುವಿನ ಆರೈಕೆಗೆ ಬೇಕಾದ ಎಲ್ಲ ನೆರವು ನೀಡುವುದಾಗಿ ದಂಪತಿಯ ಮನವೊಲಿಸಲು ಯತ್ನಿಸಲಾಯಿತು. ಆದರೆ, ಮಗು ಸಾಕಲು ನಮಗೆ ಸಾಧ್ಯವಿಲ್ಲ ಎಂದು ದಂಪತಿ ಹಠ ಹಿಡಿದಿದ್ದಾರೆ.ಕೊನೆಗೆ ಇಲಾಖೆಯ ನಿಯಮಾನುಸಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಗುವನ್ನು ತಮ್ಮ ವಶಕ್ಕೆ ಪಡೆದು ಮಂಡ್ಯದ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ