ನಾವು ವೀರೇಂದ್ರ ಹೆಗ್ಗಡೆಯನ್ನ ದೇವತಾ ಮನುಷ್ಯ ಅಂತ ಭಾವಿಸಿದ್ದೀವಿ: ಬಿಜೆಪಿ ಮುಖಂಡ ಸಿ.ಟಿ.ರವಿ - Mahanayaka

ನಾವು ವೀರೇಂದ್ರ ಹೆಗ್ಗಡೆಯನ್ನ ದೇವತಾ ಮನುಷ್ಯ ಅಂತ ಭಾವಿಸಿದ್ದೀವಿ: ಬಿಜೆಪಿ ಮುಖಂಡ ಸಿ.ಟಿ.ರವಿ

c t ravi
09/08/2025


Provided by

ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ಸಾಕ್ಷಿ ದೂರುದಾರನ ದೂರಿನನ್ವಯ ಎಸ್ ಐಟಿ ರಚನೆಯಾಗಿ ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ಶವ ಹೂತು ಹಾಕಿರುವವರ ವಿರುದ್ಧ ಸೃಷ್ಟಿಯಾಗಿರುವ ಜನಾಕ್ರೋಶ, ಜನಾಭಿಪ್ರಾಯಗಳ  ನಡುವೆ ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ.ರವಿ(C.T.Ravi ) ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಪ್ರಾಮಾಣಿಕವಾಗಿ–ಪಾರದರ್ಶಕವಾಗಿ ತನಿಖೆಯಾಗಲಿ, ತನಿಖೆಗೆ ಮೊದಲೇ ಆಧಾರ ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋಕೆ ಯಾರಿಗೂ ಅಧಿಕಾರವಿಲ್ಲ, ಎಸ್.ಡಿ.ಪಿ.ಐ. ಟ್ರ್ಯಾಕ್ ರೆಕಾರ್ಡ್ ಕಮ್ಯುನಲ್ ಟ್ರ್ಯಾಕ್ ರೆಕಾರ್ಡ್, ಆ ಕಮ್ಯುನಲ್ ಟ್ರ್ಯಾಕ್ ರೆಕಾರ್ಡ್ ಸಂಘಟನೆ ಧರ್ಮಸ್ಥಳದ ವಿರುದ್ಧ ಹೋರಾಡುತ್ತೆ,  ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ವೀರೇಂದ್ರ ಹೆಗ್ಗಡೆಯನ್ನ ದೇವತಾ ಮನುಷ್ಯ ಅಂತ ಭಾವಿಸಿದ್ದೀವಿ, ಪರೋಪಕಾರ ಜೀವನದ ಅವರ ಬದುಕಿಗೆ ಅಷ್ಟು ಅರ್ಥ ಇದೆ,  ಚಿಪ್ಪಲ್ಲಿ ಕಾಫಿ ಕೊಡ್ತಿದ್ದ ಕಾಲದಲ್ಲಿ ಅವರು ಸಹಪಂಕ್ತಿ ಭೋಜನವನ್ನ ಎತ್ತಿಹಿಡಿದಿದ್ರು, ಅವರಿಂದ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಅಂತ ಹೇಳಿದರು.

ಕೊಲೆ–ಆತ್ಮಹತ್ಯೆ–ಅಪರಿಚಿತ ಶವ ಇದರ ಬಗ್ಗೆ ತನಿಖೆಯಾಗಲಿ, ತಪ್ಪು ಯಾರೇ ಮಾಡಿದ್ರು ತಪ್ಪೇ, ತನಿಖೆಗೂ ಮೊದಲೇ ಧರ್ಮಸ್ಥಳ–ಧರ್ಮಾಧಿಕಾರಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ದೊಡ್ಡ ಷಡ್ಯಂತ್ರ ಅಂತ ಅವರು ಆಪಾದಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ