ಈ ದೀಪಾವಳಿಗೆ ದೊಡ್ಡ ಗಿಫ್ಟ್ ನೀಡುತ್ತೇವೆ: ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ಮೋದಿ ಹೇಳಿಕೆ - Mahanayaka

ಈ ದೀಪಾವಳಿಗೆ ದೊಡ್ಡ ಗಿಫ್ಟ್ ನೀಡುತ್ತೇವೆ: ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ಮೋದಿ ಹೇಳಿಕೆ

pm modi
15/08/2025


Provided by

ನವದೆಹಲಿ: ದೇಶದ ಜನತೆಗೆ ಈ ದೀಪಾವಳಿಗೆ ದೊಡ್ಡ ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಸ್ವಾತಂತ್ರ್ಯ ದಿನದ ಅಂಗವಾಗಿ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಜಿಎಸ್ ​ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದರಲ್ಲದೇ ಭಾರತೀಯರಿಗೆ ದೊಡ್ಡ ಗಿಫ್ಟ್​ ನೀಡುವುದಾಗಿ ತಿಳಿಸಿದ್ದಾರೆ.

ತೆರಿಗೆ ಸ್ಲ್ಯಾಬ್ ​​ಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಅಗತ್ಯ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ ಟಿ ದರಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಈ ದೀಪಾವಳಿಯ ಹೊತ್ತಿಗೆ, ನೀವು ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಹೊಸ, ಸರಳೀಕೃತ ಜಿಎಸ್ಟಿ ರಚನೆಯನ್ನು ನೀವು ಕಾಣುತ್ತೀರಿ ಎಂದಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ನಾವು ಜಿಎಸ್ಟಿ ಮೂಲಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಎಂಟು ವರ್ಷಗಳ ನಂತರ, ನಾವು ಅದನ್ನು ಪರಿಶೀಲಿಸುವುದು ಈ ಸಮಯದ ಅಗತ್ಯವಾಗಿದೆ. ನಾವು ಅದನ್ನು ಪರಿಶೀಲಿಸಿದ್ದೇವೆ. ರಾಜ್ಯಗಳೊಂದಿಗೆ ಮಾತನಾಡಿದ್ದೇವೆ. ನಮ್ಮ ಕೈಗಾರಿಕೆಗಳು ದೊಡ್ಡ ಲಾಭವನ್ನು ಪಡೆಯುತ್ತವೆ. ದೈನಂದಿನ ವಸ್ತುಗಳು ಅಗ್ಗವಾಗುತ್ತವೆ, ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ