ಕೊಟ್ಟಿಗೆಹಾರ: ಡೆಮೋ ಕಾರಿನಿಂದಲೇ ಡಿಸೇಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ - Mahanayaka

ಕೊಟ್ಟಿಗೆಹಾರ: ಡೆಮೋ ಕಾರಿನಿಂದಲೇ ಡಿಸೇಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ

chikkamagaluru
19/08/2025


Provided by

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ–ಬಣಕಲ್ ರಸ್ತೆ ಮಧ್ಯೆ ಶೋ ರೂಂ ಸಿಬ್ಬಂದಿಗಳೇ ಡೆಮೋ ಕಾರಿನಿಂದ ಡಿಸೇಲ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನಿಂದ ಕಡೂರಿನತ್ತ ಹೊಸ ಟಾಟಾ ಯೋಧ ಕಾರನ್ನು ಶೋ ರೂಂಗೆ ತಲುಪಿಸಲು ಹೊರಟಿದ್ದ ಸಿಬ್ಬಂದಿಗಳು ಮಾರ್ಗಮಧ್ಯೆ ಕಾರಿನ ಇಂಜಿನ್ ಪಕ್ಕದ ಪಂಪ್ ಪೈಪ್ ಬಿಚ್ಚಿ ಸುಮಾರು 10 ಲೀಟರ್ ಡಿಸೇಲ್ ಇಳಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ.

ಕಳ್ಳತನ ಮಾಡಿದ ಹಣದಿಂದ ಎಣ್ಣೆ ಹೊಡೆದು, ನಾನ್ ವೆಜ್ ಊಟ ಮಾಡಿ ವಾಪಸ್ ಹೋದ ಸಿಬ್ಬಂದಿಗಳ ಕಾರ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಹೊಸ ವಾಹನಗಳನ್ನು ಶೋ ರೂಂಗಳಿಗೆ ತಲುಪಿಸುವಾಗಲೇ ಸಿಬ್ಬಂದಿಗಳು ಇಂತಹ ದುಷ್ಕೃತ್ಯದಲ್ಲಿ ತೊಡಗಿರುವುದು ಗಂಭೀರವಾಗಿದ್ದು, ಈ ಕುರಿತು ಸ್ಥಳೀಯರು ಕಂಪನಿ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ