“ಲಸಿಕೆ ಹಾಕಿಸಿ ಬಿಡಿ”: ಬೀದಿನಾಯಿ ಪ್ರಕರಣದ ತೀರ್ಪು ಸಡಿಸಿದ ಸುಪ್ರಿಂ ಕೋರ್ಟ್

ನವದೆಹಲಿ: ಬೀದಿನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಇದೀಗ ಮಾರ್ಪಡಿಸಿದ್ದು, ಲಸಿಕೆ ಮತ್ತು ಜಂತುಹುಳು ನಿವಾರಣಾ ಚಿಕಿತ್ಸೆಯ ನಂತರ ಅದೇ ಪ್ರದೇಶಕ್ಕೆ ಅವುಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರ ಮೂವರು ನ್ಯಾಯಾಧೀಶರ ಪೀಠವು ನ್ಯಾಯಾಲಯದ ಹಿಂದಿನ ಆದೇಶವನ್ನು ಮರುಪರಿಶೀಲಿಸಿ, ಈ ಆದೇಶ ನೀಡಿದೆ. ಇದರ ಜೊತೆಗೆ ಬೀದಿನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಆಕ್ರಮಣಕಾರಿ ನಡವಳಿಕೆ ಅಥವಾ ರೇಬಿಸ್ ಸೋಂಕಿನ ಹೊರತುಪಡಿಸಿದ ಬೀದಿನಾಯಿಗಳನ್ನು ಲಸಿಕೆ ಹಾಕಿಸಿ ಪ್ರತ್ಯೇಕ ಆಶ್ರಯದಲ್ಲಿಡಬೇಕು ಎಂದು ಸೂಚಿಸಲಾಗಿದೆ. ಇನ್ನೂ ನ್ಯಾಯಾಲಯದ ಆದೇಶದಿಂದ ಪ್ರಾಣಿ ಪ್ರಿಯರು ನಿರಾಳವಾಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಬಾರದು, ಅದಕ್ಕೆಂದು ಪ್ರತ್ಯೇಕ ಜಾಗ ನಿರ್ಮಿಸಬೇಕು. ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದು ಕಂಡು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD