ಸುಜಾತಾ ಭಟ್ ವಿರುದ್ಧ ಷಡ್ಯಂತ್ರ: “ಒತ್ತಡ ಹಾಕಿ ಸೌಜನ್ಯ ಹೋರಾಟಗಾರರ ಹೆಸರು ಹೇಳಿಸಿದರು”!

ಬೆಂಗಳೂರು: ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಎಸ್ ಐಟಿಗೆ ದೂರು ನೀಡಿದ್ದ ಸುಜಾತಾ ಭಟ್ ವಿಚಾರದಲ್ಲಿ ಒಂದರ ಹಿಂದೊಂದರಂತೆ ತಿರುವುಗಳು ಲಭ್ಯವಾಗ್ತಿದೆ.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅನನ್ಯಾ ಭಟ್ ನಾಪತ್ತೆ ಕಥೆ ಫೇಕ್ ಎಂದು ಸುದ್ದಿ ಪ್ರಸಾರವಾಗಿತ್ತು. ಸುಜಾತಾ ಭಟ್ ಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ, ಅದೆಲ್ಲವೂ ಫೇಕ್ ಎಂದು ಸುಜಾತಾ ಭಟ್ ತಪ್ಪೊಪ್ಪಿಗೆ ನೀಡಿ ಕ್ಷಮೆ ಕೇಳಿದ್ದರು. ಈ ವಿಡಿಯೋ ಸಂಚನ ಮೂಡಿತ್ತು. ಈ ವಿಡಿಯೋವನ್ನು ಮುಂದಿಟ್ಟುಕೊಂಡು ಕೆಲವು ಮಾಧ್ಯಮಗಳು ಸೌಜನ್ಯ ಪರ ಹೋರಾಟಗಾರರನ್ನು ಗುರಿಯಾಗಿಸಿ ಸುದ್ದಿ ಪ್ರಸಾರ ಮಾಡಿತ್ತು.
ಈ ಬಗ್ಗೆ ಬೆಂಗಳೂರಿನ ತಮ್ಮ ಮನೆಯಲ್ಲಿ ಪ್ರತಿಕ್ರಿಯಿಸಿದ ಸುಜಾತಾ ಭಟ್, ಅನನ್ಯ ನನ್ನ ಮಗಳು, ನಾನು ಅದನ್ನು ಎಸ್ ಐಟಿಯಲ್ಲಿ ಪ್ರೂವ್ ಮಾಡುತ್ತೇನೆ. ಯಾರೋ ಒಬ್ಬರು ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಕಾರಲ್ಲಿ ಕೂರಿಸಿದರು. ಯೂಟ್ಯೂಬ್ ನವರು ನನ್ನನ್ನು ಬೆದರಿಸಿ ಈ ಹೇಳಿಕೆ ಪಡೆದುಕೊಂಡರು ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಅದರಲ್ಲಿ ಹೇಳಿದ್ದು ಸುಳ್ಳು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹೆಸರು ಹೇಳುವಂತೆ ಒತ್ತಡ ಹಾಕಲಾಗಿತ್ತು. ನಾನು ಭಯದಿಂದ ಹೇಳಿದೆ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD