ಒಂದು ರಾಷ್ಟ್ರ, ಒಂದು ತೆರಿಗೆ, ಈಗ ಒಂಬತ್ತು ತೆರಿಗೆಗಳಾಗಿ ಬದಲಾಯಿತು: ಜಿಎಸ್ ಟಿ ಪರಿಷ್ಕರಣೆಗೆ ಮಲ್ಲಿಕಾರ್ಜುನ ಖರ್ಗೆ  ಪ್ರಶ್ನೆ - Mahanayaka
8:08 PM Thursday 4 - September 2025

ಒಂದು ರಾಷ್ಟ್ರ, ಒಂದು ತೆರಿಗೆ, ಈಗ ಒಂಬತ್ತು ತೆರಿಗೆಗಳಾಗಿ ಬದಲಾಯಿತು: ಜಿಎಸ್ ಟಿ ಪರಿಷ್ಕರಣೆಗೆ ಮಲ್ಲಿಕಾರ್ಜುನ ಖರ್ಗೆ  ಪ್ರಶ್ನೆ

mallikarjun kharge
04/09/2025


Provided by

ನವದೆಹಲಿ: ಜಿಎಸ್‌ ಟಿ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವನ್ನು ಟೀಕಿಸಿದ್ದು, ಎಂಟು ವರ್ಷಗಳ ನಂತರ ಕೇಂದ್ರವು ಅಂತಿಮವಾಗಿ ಎಚ್ಚರಗೊಂಡಿರುವುದು ಒಳ್ಳೆಯದು ಎಂದಿದ್ದಾರೆ.

ಒಂದು ರಾಷ್ಟ್ರ, ಒಂದು ತೆರಿಗೆ, ಇದೀಗ ಒಂದು ರಾಷ್ಟ್ರ ಒಂಬತ್ತು ತೆರಿಗೆಗಳಾಗಿ ಬದಲಾಯಿತು ಎಂದು ಜಿಎಸ್‌ಟಿ  ಸುಧಾರಣೆಗಳ ವಿಳಂಬವನ್ನು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಜಿಎಸ್‌ ಟಿ ಮಂಡಳಿಯು ಇತ್ತೀಚೆಗೆ ತೆರಿಗೆ ಪದ್ಧತಿಯಲ್ಲಿ ವ್ಯಾಪಕ ಬದಲಾವಣೆಗಳನ್ನು ಅಂಗೀಕರಿಸಿದ್ದು, ಅಗತ್ಯ ಸರಕು ಮತ್ತು ಸೇವೆಗಳ ಮೇಲಿನ ಸ್ಲ್ಯಾಬ್‌ ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಮತ್ತು ದರಗಳನ್ನು ಕಡಿತಗೊಳಿಸಿದೆ. ಈ ಸಂಬಂಧ ಪ್ರತಕ್ರಿಯಿಸಿದ ಅವರು,  ಸುಮಾರು ಒಂದು ದಶಕದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಎಸ್‌ ಟಿಯನ್ನು ಸರಳೀಕರಿಸಬೇಕೆಂದು ಒತ್ತಾಯಿಸುತ್ತಿದೆ. ಮೋದಿ ಸರ್ಕಾರ ‘ಒಂದು ರಾಷ್ಟ್ರ, ಒಂದು ತೆರಿಗೆ’ಯನ್ನು ‘ಒಂದು ರಾಷ್ಟ್ರ, 9 ತೆರಿಗೆಗಳಾಗಿ ಪರಿವರ್ತಿಸಿದೆ. ಇದರಲ್ಲಿ ಶೇಕಡಾ 0, ಶೇಕಡಾ 5, ಶೇಕಡಾ 12, ಶೇಕಡಾ 18, ಶೇಕಡಾ 28 ಮತ್ತು ಶೇಕಡಾ 0.25, ಶೇಕಡಾ 1.5, ಶೇಕಡಾ 3 ಮತ್ತು ಶೇಕಡಾ 6 ರ ವಿಶೇಷ ದರಗಳು ಸೇರಿವೆ” ಎಂದು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ತನ್ನ 2019 ಮತ್ತು 2024 ರ ಪ್ರಣಾಳಿಕೆಗಳಲ್ಲಿ ಸರಳ ಮತ್ತು ತರ್ಕಬದ್ಧ ತೆರಿಗೆ ವ್ಯವಸ್ಥೆಯೊಂದಿಗೆ ಜಿಎಸ್ಟಿ 2.0 ಅನ್ನು ಈಗಾಗಲೇ ಪ್ರಸ್ತಾಪಿಸಿದೆ. ಜಿಎಸ್ಟಿ ಅನುಸರಣೆಗಳನ್ನು ಸರಳಗೊಳಿಸುವಂತೆ ಒತ್ತಾಯಿಸಿದೆ. ಇದು ಎಂಎಸ್ ಎಂಇಗಳು ಮತ್ತು ಸಣ್ಣ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

2005 ರಲ್ಲಿ ಕಾಂಗ್ರೆಸ್-ಯುಪಿಎ ಸರ್ಕಾರವು ಜಿಎಸ್ಟಿ ಕಲ್ಪನೆಯನ್ನು ಮೊದಲು ಪರಿಚಯಿಸಿತು ಮತ್ತು 2011 ರಲ್ಲಿ ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಜಿಎಸ್ಟಿ ಮಸೂದೆಯನ್ನು ಮಂಡಿಸಿದಾಗ, ಅದನ್ನು ಬಿಜೆಪಿ ವಿರೋಧಿಸಿತು ಎಂದು ಖರ್ಗೆ ಹೇಳಿದ್ದಾರೆ.

ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಎಸ್‌ಟಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಇಂದು, ಅದೇ ಬಿಜೆಪಿ ಸರ್ಕಾರವು ಸಾಮಾನ್ಯ ಜನರಿಂದ ತೆರಿಗೆ ಸಂಗ್ರಹಿಸುವುದೇ ಒಂದು ದೊಡ್ಡ ಸಾಧನೆ ಎಂಬಂತೆ ದಾಖಲೆಯ ಜಿಎಸ್ಟಿ ಸಂಗ್ರಹವನ್ನು ಆಚರಿಸುತ್ತಿದೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ