ಮಾಲ್ ನ ನಾಲ್ಕನೇ ಅಂತಸ್ತಿನಿಂದ ಬಿದ್ದು ವ್ಯಕ್ತಿ ಸಾವು

ಮೈಸೂರು: ಮಾಲ್ ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ವೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನ ಡಿಆರ್ ಸಿ ಮಾಲ್ ನಲ್ಲಿ ನಡೆದಿದೆ.
ಸುನೀಲ್ (27) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಂದ್ರು ಎಂಬವರು ಗಾಯಗೊಂಡಿದ್ದಾರೆ.
ಸೋಮವಾರ ಈ ಘಟನೆ ನಡೆದಿದೆ. ಡಿಆರ್ ಸಿ ಮಾಲ್‌ನ ನಾಲ್ಕನೇ ಮಹಡಿಯಲ್ಲಿದ್ದ ಬೋರ್ಡ್‌ವೊಂದನ್ನು ಸುನೀಲ್ ತೆರವು ಮಾಡಲು ಕೆಲಸ ಮಾಡುತ್ತಿದ್ದರು. ಈ ವೇಳೆ ಗಮನಕ್ಕೆ ಬಾರದೇ ಪಿಒಪಿ ಮೇಲೆ ಕಾಲಿಟ್ಟಿದ್ದು, ಕೆಳಗೆ ಬಿದ್ದಿದ್ದಾರೆ.
ಕೆಳಗೆ ಬಿದ್ದ ವೇಳೆ ರಾಡ್ ವೊಂದರಲ್ಲಿ ಸುನೀಲ್ ನೇತಾಡುತ್ತಿದ್ದರು, ಅವರನ್ನ ರಕ್ಷಿಸಲು ಚಂದ್ರು ಮುಂದಾಗಿದ್ದರು. ಆದ್ರೆ ಅವರು ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದಿದ್ದಾರೆ. ನಂತರ ರಾಡ್ ಹಿಡಿದುಕೊಂಡಿದ್ದ ಸುನೀಲ್ ಕೂಡ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD