ಮಗು ಸತ್ತೇ ಹೋಯ್ತು ಎಂದು ಭಾವಿಸಿದ್ದಾಗಲೇ ನಡೆಯಿತು ಪವಾಡ: ಜೋರಾಗಿ ಅತ್ತು, ಉಸಿರಾಡಿದ ಮಗು!

ಚಿಕ್ಕಮಗಳೂರು: ಆಕ್ಸಿಜನ್ ತೆಗೆದರೆ ಮಗು ಸಾಯುತ್ತೆ ಅಂತ ಹೇಳಿ ಖಾಸಗಿ ಆಸ್ಪತ್ರೆ ಮಗುವನ್ನ ಕೊಟ್ಟು ಕಳುಹಿಸಿದ ಬೆನ್ನಲ್ಲೇ ಮಗು ಮನೆಯ ದಾರಿ ಮಧ್ಯೆ ಜೋರಾಗಿ ಅತ್ತು ಉಸಿರಾಡಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನ ಮಗುವಿಗೆ ಚಿಕಿತ್ಸೆ ನೀಡಿ ಚಿಕಿತ್ಸೆ ಫಲಕಾರಿಯಾಗಿಲ್ಲ, ಆಕ್ಸಿಜನ್ ತೆಗೆದರೆ ಮಗು ಸಾಯುತ್ತೆ ಅಂತ ಪೋಷಕರಿಗೆ ಹೇಳಿ, ಮಗುವನ್ನು ಕಳುಹಿಸಿದ್ದರು.
ಹೀಗಾಗಿ ಮಗು ಸತ್ತಿದೆ ಎಂದುಕೊಂಡು ಪೋಷಕರು ಊರಿಗೆ ಹೋಗುವ ಮಾರ್ಗದಲ್ಲಿ ಮಗು ಜೋರಾಗಿ ಅತ್ತಿದ್ದು, ಉಸಿರಾಡಿದೆ. ಮಗುವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಮುಂದಾಗಿದ್ದ ಪೋಷಕರು ತಕ್ಷಣವೇ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮೂಡಿಗೆರೆಯಿಂದ ಹಾಸನದ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಸದ್ಯ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಆಂಬುಲೆನ್ಸ್ ಗಳಲ್ಲಿ ಎಸ್ಕಾರ್ಟ್ ಕೊಟ್ಟುಕೊಂಡು ಆ್ಯಂಬುಲೆನ್ಸ್ ಗಳು ಮಗುವನ್ನು ಆಸ್ಪತ್ರೆಗೆ ಸಾಗಿಸಿತು.
ಮೂಡಿಗೆರೆ ತಾಲೂಕಿನ ಲೋಕವಳ್ಳಿ ಗ್ರಾಮದ ಕಾಫಿ ಎಸ್ಟೇಟಿನ ಕೂಲಿ ಕಾರ್ಮಿಕರ ಮಗು ಮರುಜನ್ಮ ಪಡೆದ ಮಗುವಾಗಿದೆ. ಮಗುವಿನ ತಂದೆ ತಾಯಿ ಕೂಡ ಮಗು ಸಾವನ್ನಪ್ಪಿದೆ ಎಂದೇ ಅಂದುಕೊಂಡಿದ್ದರು. ಇದೀಗ ಮಗು ಮತ್ತೆ ಎಚ್ಚೆತ್ತುಕೊಂಡಿರುವ ಹಿನ್ನೆಲೆ ಪೋಷಕರಾದ ಸುಪ್ರಿತ್—ಹರೀಶ್ ನಿಟ್ಟುಸಿರು ಬಿಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD