ಸೆಪ್ಟಂಬರ್ 22ರಿಂದ ಜಾತಿ ಗಣತಿ: ಈ 60 ಪ್ರಶ್ನೆಗಳನ್ನ ಕೇಳಲಿದ್ದಾರೆ ಗಣತಿದಾರರು - Mahanayaka
5:28 PM Saturday 13 - September 2025

ಸೆಪ್ಟಂಬರ್ 22ರಿಂದ ಜಾತಿ ಗಣತಿ: ಈ 60 ಪ್ರಶ್ನೆಗಳನ್ನ ಕೇಳಲಿದ್ದಾರೆ ಗಣತಿದಾರರು

jathi ganati
13/09/2025

ಬೆಂಗಳೂರು:  ರಾಜ್ಯಾದ್ಯಂತ ಸೆಪ್ಟಂಬರ್ 22ರಿಂದ  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದೆ. ಅಕ್ಟೋಬರ್ 7ರವರೆಗೆ ಈ ಸಮೀಕ್ಷೆ ನಡೆಯಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆಗೆ ಸಕಲ ಸಿದ್ಧತೆ ನಡೆಸಿದೆ.


Provided by

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಡಿಸೆಂಬರ್​​ ತಿಂಗಳಿನಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತಿದೆ. 16 ದಿನಗಳ ಕಾಲ ನಡೆಯುವ ಈ ಜಾತಿ ಗಣತಿಯಲ್ಲಿ 1.75 ಲಕ್ಷ ಸರ್ಕಾರಿ ಶಾಲೆ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.

ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಮೂಲ‌ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಮಾಡಲಿದ್ದಾರೆ.

ಸಮೀಕ್ಷೆ ವೇಳೆ ಗಣತಿದಾರರು 60 ಪ್ರಶ್ನೆಗಳನ್ನು ಕೇಳಲಿದ್ದಾರೆ. ಆಶಾ ಕಾರ್ಯಕರ್ತೆಯರು ಮುಂಚಿತವಾಗಿಯೇ ಈ 60 ಪ್ರಶ್ನೆಗಳ ನಮೂನೆಯನ್ನು ಪ್ರತಿ ಮನೆಗಳಿಗೆ ತೆರಳಿ ನೀಡಲಿದ್ದಾರೆ. ಆ ಮೂಲಕ ಸಾರ್ವಜನಿಕರು ಪ್ರಶ್ನೆಗಳನ್ನು ಓದಿ ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದು.‌ ಬಳಿಕ ಗಣತಿದಾರರು ಮನೆಗೆ ಬಂದು 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿದ್ದಾರೆ.

ಸಮೀಕ್ಷೆಯ ವೇಳೆ ಗಣತಿದಾರರು 60 ಪ್ರಶ್ನೆಗಳ ಮೂಲಕ ಮಾಹಿತಿ ಕೇಳಲಿದ್ದಾರೆ. ಸಾರ್ವಜನಿಕರು ನೀಡುವ ಮಾಹಿತಿಯನ್ನು ಗಣತಿದಾರರು ಮೊಬೈಲ್ ಅಪ್ಲಿಕೇಶನ್ ​ನಲ್ಲಿ ತುಂಬಲಿದ್ದಾರೆ. ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು, ಕೌಶಲ್ಯ ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಹಾಗೂ ಚರಾಸ್ಥಿ ವಿವರಗಳನ್ನು ಕೇಳಲಾಗುತ್ತದೆ.

ಕುಟುಂಬದ ಸದಸ್ಯರು ಆಧಾರ್ ವಿವರ, ವೈಯಕ್ತಿಕ ಮಾಹಿತಿ ಲಿಂಗ, ವಯಸ್ಸು, ಮಾತೃ ಭಾಷೆ, ಶೈಕ್ಷಣಿಕ ವಿವರ,  ಮೀಸಲಾತಿ ಪಡೆದ ಮಾಹಿತಿ ಸಂಗ್ರಹ, ಔದ್ಯೋಗಿಕ ವಿವರ, ರಾಜಕೀಯ ಪ್ರಾತಿನಿಧ್ಯ,  ಆದಾಯ ಮಾಹಿತಿ, ಕುಟುಂಬದ ಆಸ್ತಿ ವಿವರ,  ಜಾನುವಾರುಗಳ ಸಂಖ್ಯೆ, ಕೃಷಿ ಸಂಬಂಧಿತ ಚಟುವಟಿಕೆಗಳ ಬಗ್ಗೆ ಮಾಹಿತಿ, ಕುಟುಂಬದಲ್ಲಿ ವಾಹನ ಮಾಹಿತಿ, ಸರ್ಕಾರದಿಂದ ಪಡೆದ ಸೌಲಭ್ಯಗಳ ಮಾಹಿತಿ, ನಿಮ್ಮ ಪ್ರದೇಶಗಳ ಸಾರಿಗೆ ಸೌಲಭ್ಯ, ವಾಸವಿರುವ ಪ್ರದೇಶಗಳ ಪ್ರಕೃತಿ ವಿಕೋಪಗಳ ಮಾಹಿತಿ ಸೇರಿದಂತೆ 60 ಪ್ರಶ್ನೆಗಳು ಇರಲಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ