ಸಫಾರಿ ಜೀಪ್ ನಿಂದ ಇಳಿದ ಸಿಬ್ಬಂದಿಯನ್ನು ಪ್ರವಾಸಿಗರ ಎದುರೇ ತಿಂದು ಹಾಕಿದ ಸಿಂಹಗಳು!
	
	
	
	
	
ಬ್ಯಾಂಕಾಕ್: ಸಫಾರಿ ಜೀಪ್ ನಿಂದ ಇಳಿದ ಸಿಬ್ಬಂದಿಯ ಮೇಲೆ ಸಿಂಹಗಳ ಗುಂಪು ದಾಳಿ ನಡೆಸಿ ಎಳೆದೊಯ್ದು ತಿಂದು ಹಾಕಿರುವ ಘಟನೆ ಬ್ಯಾಂಕಾಕ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ನಡೆದಿದೆ.
ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, 15 ನಿಮಿಷಗಳ ಕಾಲ ಈ ಘಟನೆಯ ದೃಶ್ಯವನ್ನು ನೂರಾರು ಪ್ರವಾಸಿಗರು ಕಣ್ಣಾರೆ ಕಂಡಿದ್ದು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯನ್ನು ಸಾಕಷ್ಟು ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.
ಸಫಾರಿ ವರ್ಲ್ಡ್ ಆಡಳಿತ ಮಂಡಳಿ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಮುಂದಿನ ದಿನಗಳಲ್ಲಿ ಮೃಗಾಲಯದಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ನಿರ್ಧಾರವನ್ನು ಕೈಗೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























