ಖಾಕಿಯಿಂದ ಆಗದ ಕೆಲಸ ನೀನೇ ಮಾಡು: ಅಕ್ರಮ ಮದ್ಯ ಮಾರಾಟ ತಡೆಗೆ ದೇವರ ಮೊರೆ ಹೋದ ಗ್ರಾಮಸ್ಥರು - Mahanayaka
9:36 AM Thursday 18 - September 2025

ಖಾಕಿಯಿಂದ ಆಗದ ಕೆಲಸ ನೀನೇ ಮಾಡು: ಅಕ್ರಮ ಮದ್ಯ ಮಾರಾಟ ತಡೆಗೆ ದೇವರ ಮೊರೆ ಹೋದ ಗ್ರಾಮಸ್ಥರು

chikkamagaluru
18/09/2025

ಚಿಕ್ಕಮಗಳೂರು:  ಎಣ್ಣೆ ಮಾರಾಟ ನಿಲ್ಲಿಸಲು ಮಲೆನಾಡಿಗರು ದೇವರ ಮೊರೆ ಹೋದ  ಘಟನೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.


Provided by

ಗ್ರಾಮದ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.  ಕೆಲಸ–ಕಾರ್ಯ ಬಿಟ್ಟು ಯುವ ಪೀಳಿಗೆ ಕುಡಿತಕ್ಕೆ ದಾಸರಾಗ್ತಿದ್ದಾರೆ.  ಅಂಗಡಿಯವ್ರು ಎಣ್ಣೆ ಮಾರಾಟ ಮಾಡಬಾರ್ದು, ನಮ್ಮೂರ್ನೋರು ಖರೀದಿಸಬಾರ್ದು ಅಂತ ದೇವರ ಮೊರೆ ಹೋಗಿದ್ದಾರೆ.

ಗ್ರಾಮಸ್ಥರೆಲ್ಲಾ ಗ್ರಾಮದೇವತೆ ಚಾಮುಂಡೇಶ್ವರಿಗೆ ಮೊರೆ ಹೋಗಿದ್ದಾರೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಹೀಗಾಗಿ  ಗ್ರಾಮಸ್ಥರು ಈ ರೀತಿಯಾಗಿ ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದ್ದಾರೆ.

ಖಾಕಿಯಿಂದ ಆಗದ ಕೆಲಸ ನೀನೆ ಮಾಡು ಎಂದು ಗ್ರಾಮಸ್ಥರು ದೇವರಿಗೆ ಮೊರೆಯಿಟ್ಟಿದ್ದಾರೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ ಗ್ರಾಮದಲ್ಲಿ ಅಕ್ರಮ ಮದ್ಯದ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡಿ ಯುವ ಜನರ ಜೀವನ ಹಾಳು ಮಾಡಲಾಗುತ್ತಿದೆ, ಅಂತಹವರಿಗೆ ಶಿಕ್ಷೆ ನೀಡು ಎಂದು ದೇವರನ್ನ ಪ್ರಾರ್ಥನೆ ಮಾಡಲಾಗಿದೆ.  ಪೊಲೀಸರು ಇನ್ನಾದರೂ ಕ್ರಮಕೈಗೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ