ಪುತ್ತೂರು: ಶ್ರೀ ಕೃಷ್ಣನೇ ಮಗುವಿನ ಅಪ್ಪ: ಡಿಎನ್ ಎ ವರದಿ ಬಂದಿದೆ ಎಂದ ಕೆ.ಪಿ.ನಂಜುಂಡಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ನ ವಿರುದ್ಧ ಇದೀಗ ಡಿ.ಎನ್.ಎ. ಪರೀಕ್ಷೆ ವರದಿ ಬಂದಿದ್ದು, ಇನ್ನಾದರೂ ಸಂತ್ರಸ್ತ ಯುವತಿಯನ್ನ ವಿವಾಹವಾಗ್ತಾರಾ ಅನ್ನೋ ಪ್ರಶ್ನೆ ಕೇಳಿ ಬಂದಿದೆ. ಈ ನಡುವೆ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಡಿಎನ್ ಎ ಪರೀಕ್ಷೆ ವರದಿ ಬಂದಿದೆ, ಸಂತ್ರಸ್ತೆಯ ಮಗುವಿನ ಅಪ್ಪ ಶ್ರೀಕೃಷ್ಣ ಜೆ. ರಾವ್ ಎಂದು ಸಂತ್ರಸ್ತೆಯ ಮನೆಯವರಿಗೆ ಮಾಹಿತಿಯನ್ನು ತಿಳಿಸಲಾಗಿದೆ ಎಂದು ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಸಮಾಜದ ಬಡ ಹೆಣ್ಣು ಮಗಳಿಗೆ ಅನ್ಯಾವಾಗಿದೆ, ಹಿಂದಿನ ಕಾಲದಲ್ಲಿ ಸೀತಾ ಮಾತೆಗೆ ಅಗ್ನಿ ಪರೀಕ್ಷೆ ನಡೆಯಿತು, ಇಂದಿನ ಕಾಲದಲ್ಲಿ ಡಿಎನ್ ಎ ಪರೀಕ್ಷೆಯೇ ಅಂತಿಮವಾಗಿದೆ. ಡಿಎನ್ ಎ ಪರೀಕ್ಷೆ ವರದಿ ಕೋರ್ಟ್ ಗೆ ಈಗಾಗಲೇ ಹೋಗಿದೆ ಅಂತ ಅವರು ಹೇಳಿದರು.
ಜಗನ್ನಿವಾಸ ರಾವ್ ಪುತ್ರ ಶ್ರೀ ಕೃಷ್ಣ ಜೆ. ರಾವ್ ಸಂತ್ರಸ್ತೆಯನ್ನು ವಿವಾಹವಾಗಬೇಕು ಎನ್ನುವುದು ನಮ್ಮ ಕೋರಿಕೆ. ಹುಡುಗ ಇನ್ನೂ ಬಾಳಿ ಬದುಕನೇಕಾದವ, ಅವರು ಮದುವೆ ಆದರೆ ಉತ್ತಮ, ಕೋರ್ಟ್ ಗೆ ಹೋಗಲು ನಮಗೂ ಇಷ್ಟವಿಲ್ಲ, ಆದರೂ ಕೋರ್ಟ್ ನಲ್ಲಿ ಅದರ ರೀತಿಯಲ್ಲಿ ನಡೆಯುತ್ತದೆ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD