ಕೋಳಿ ಪದಾರ್ಥ ಕೇಳಿದ್ದಕ್ಕೆ 7 ವರ್ಷದ ಮಗನನ್ನು ಹೊಡೆದುಕೊಂದ ತಾಯಿ: ಮಗಳ ಸ್ಥಿತಿ ಗಂಭೀರ - Mahanayaka
11:02 AM Saturday 22 - November 2025

ಕೋಳಿ ಪದಾರ್ಥ ಕೇಳಿದ್ದಕ್ಕೆ 7 ವರ್ಷದ ಮಗನನ್ನು ಹೊಡೆದುಕೊಂದ ತಾಯಿ: ಮಗಳ ಸ್ಥಿತಿ ಗಂಭೀರ

pallavi ghumde
29/09/2025

ಮುಂಬೈ: ಕೋಳಿ ಖಾದ್ಯ ಕೇಳಿದ್ದಕ್ಕಾಗಿ ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳ ಮೇಲೆ ಭೀಕರ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದ್ದು, ತಾಯಿಯ ಭೀಕರ ಹಲ್ಲೆಯಿಂದ 7 ವರ್ಷದ ಬಾಲಕ ಸಾವನ್ನಪ್ಪಿದ್ದು, 10 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಪೊಲೀಸರ ಪ್ರಕಾರ, ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾದ ಬಾಲಕ ತನ್ನ ತಾಯಿ ಪಲ್ಲವಿ ಧುಮ್ಡೆಗೆ ಕೋಳಿ ಖಾದ್ಯ ತಿನ್ನಬೇಕೆಂದು ಹೇಳಿದ್ದ.  ಇದರಿಂದ ಕೋಪಗೊಂಡ ತಾಯಿ ಲಟ್ಟಣಿಗೆಯಿಂದ  ಹೊಡೆದು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಲೆ, ನಂತರ ಅದೇ ಲಟ್ಟಣಿಗೆಯಿಂದ 10 ವರ್ಷದ ಮಗಳಿಗೆ ಹಲ್ಲೆ ನಡೆಸಿದ್ದಾಳೆ.

ಮಕ್ಕಳ ಕೂಗಾಟ, ಚೀರಾಟ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳೀಯ ಪೊಲೀಸರು, ಸ್ಥಳೀಯ ಅಪರಾಧ ವಿಭಾಗ ಮತ್ತು ಉಪವಿಭಾಗೀಯ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದಾರೆ.  ಮಹಿಳೆಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ತಾಯಿ ಪಲ್ಲವಿ ಘುಮ್ಡೆ (40) ತನ್ನ ಕುಟುಂಬದೊಂದಿಗೆ ಕಾಶಿಪಾದ ಪ್ರದೇಶದ ಫ್ಲಾಟ್‌ ನಲ್ಲಿ ವಾಸಿಸುತ್ತಿದ್ದಳು.  ಘಟನೆ ಸಂಬಂಧ ಪಾಲ್ಘರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶ್ಮುಖ್ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ