ತವರು ಮನೆಗೆ ಬಂದಿದ್ದ ಪತ್ನಿ; ಪತಿಯಿಂದಲೇ ಬರ್ಬರ ಹತ್ಯೆ! - Mahanayaka

ತವರು ಮನೆಗೆ ಬಂದಿದ್ದ ಪತ್ನಿ; ಪತಿಯಿಂದಲೇ ಬರ್ಬರ ಹತ್ಯೆ!

aldur
13/10/2025

ಚಿಕ್ಕಮಗಳೂರು: ಪತಿಯ ಕಾಟ ಸಹಿಸಲಾರದೇ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳನ್ನು ಪತಿ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.


Provided by

ನೇತ್ರಾ(32) ಪತಿಯಿಂದಲೇ ಹತ್ಯೆಗೊಳಗಾಗಿರುವ ಮಹಿಳೆಯಾಗಿದ್ದಾರೆ. ಪತಿ ನವೀನ್ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.  ಇವರಿಬ್ಬರಿಗೆ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಆದರೆ ಹೊಂದಾಣಿಕೆ ಸಾಧ್ಯವಾಗದ ಹಿನ್ನೆಲೆ ಮೂರು ತಿಂಗಳ ಹಿಂದೆ ನೇತ್ರಾ ತನ್ನ ತವರು ಮನೆಗೆ ಆಗಮಿಸಿ ಪೋಷಕರ ಜೊತೆಗೆ ವಾಸಿಸುತ್ತಿದ್ದರು.

ಈ ನಡುವೆ ನೇತ್ರಾ ಅವರ ಮನೆಗೆ ಆಗಮಿಸಿದ ಪತಿ ನವೀನ್, ಮನೆಯಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹಲ್ಲೆಯ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾ ಅವರನ್ನು ತಕ್ಷಣವೇ  ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಆಲ್ದೂರು  ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸದ್ಯ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ