ಸಭೆಗೆ ಬರೋಕಷ್ಟೇ ಪ್ರಗ್ನೆಂಟ್, ಗಿಂಬಳ ತಗೊಳ್ಳುವಾಗ ಇರಲ್ವಾ?: ಮಹಿಳಾ ಅಧಿಕಾರಿ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ - Mahanayaka
12:24 PM Wednesday 15 - October 2025

ಸಭೆಗೆ ಬರೋಕಷ್ಟೇ ಪ್ರಗ್ನೆಂಟ್, ಗಿಂಬಳ ತಗೊಳ್ಳುವಾಗ ಇರಲ್ವಾ?: ಮಹಿಳಾ ಅಧಿಕಾರಿ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ

15/10/2025

ದಾವಣಗೆರೆ: ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಮಹಿಳೆಯರಿಗೆ ವೇತನ ಸಹಿತ ಋತುಚಕ್ರ ರಜೆ ನೀಡುವ ಮೂಲಕ ದೇಶದಲ್ಲೇ ಮಾದರಿಯಾಗಿತ್ತು.   ಆದ್ರೆ  ಈ ನಡುವೆ ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಗರ್ಭಿಣಿ ಮಹಿಳಾ ಅಧಿಕಾರಿಯೊಬ್ಬರು ಸಭೆಗೆ ಹಾಜರಾಗದೇ ಇದ್ದ ಹಿನ್ನೆಲೆ ಅವಹೇಳನಾಕಾರಿಯಾಗಿ ಮಾತನಾಡಿರುವ ಆರೋಪ ಕೇಳಿ ಬಂದಿದೆ.


Provided by

ಚನ್ನಗಿರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಈ ಹಿನ್ನೆಲೆ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೀಟಿಂಗ್ ಬನ್ನಿ ಅಂದ್ರೆ ಪ್ರೆಗ್ನೆಂಟ್ ಇದೀನಿ ಅಂತಾ ಹೇಳ್ತಾರೆ. ಅದೇ ಗಿಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಬಾರಿ ಚಕಪ್‌ ಗೆ ಹೋಗಿದೀನಿ, ಅಲ್ಲಿ ಹೋಗಿದೀನಿ, ಇಲ್ಲಿ ಹೋಗಿದೀನಿ ಎಂದು ಹೇಳ್ತಾರೆ. ಪ್ರೆಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಿ. ಈ ತರ ಹೇಳೋಕೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಡೆಲಿವರಿ ಲಾಸ್ಟ್ ಡೇಟ್‌ ವರೆಗೂ ಡ್ಯೂಟಿ ಬೇಕು, ಸಂಬಳ ಬೇಕು, ಗಿಂಬಳ ಬೇಕು. ಆದರೆ ಡ್ಯೂಟಿ ಮಾಡಕ್ಕೆ ಆಗಲ್ಲ. ಮಾತು ಎತ್ತಿದ್ರೆ ಪ್ರೆಗ್ನೆಂಟ್ ಅಂತೀರಾ, ನಾಚಿಕೆ ಆಗಲ್ವಾ? ರಜೆ ಹಾಕ್ಕೊಳ್ಳಿ, ಪ್ರೆಗ್ನೆನ್ಸಿ ರಜೆ ಇದೆಯಲ್ಲ. ಇದಕ್ಕೆ ಇಮಿಡಿಯಟ್ ಆಕ್ಷನ್ ತಗೋಬೇಕು, ನೋಟಿಸ್ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ