ಕಾರಿನ ಏರ್ ಬ್ಯಾಗ್ ಬಡಿದು 7 ವರ್ಷದ ಬಾಲಕ ಸಾವು! - Mahanayaka
3:39 PM Thursday 16 - October 2025

ಕಾರಿನ ಏರ್ ಬ್ಯಾಗ್ ಬಡಿದು 7 ವರ್ಷದ ಬಾಲಕ ಸಾವು!

16/10/2025

ಚೆನ್ನೈ: ಕಾರಿನ ಏರ್ ಬ್ಯಾಗ್ ಬಡಿದು 7 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನ  ತಿರುಪೋರೂರು ಬಳಿಯ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿ ನಡೆದಿದೆ.


Provided by

ಕೆವಿನ್(7) ಮೃತಪಟ್ಟ ಬಾಲಕನಾಗಿದ್ದಾನೆ. ಕುಟುಂಬವನ್ನು ಕರೆದೊಯ್ಯುತ್ತಿದ್ದ ಬಾಡಿಗೆ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಏರ್‌ಬ್ಯಾಗ್ ಮುರಿದು ಈ ದುರಂತ ಸಂಭವಿಸಿದೆ.

ಘಟನೆಯ ವಿವರ:

ಚೆಂಗಲ್ಪಟ್ಟು ಜಿಲ್ಲೆಯ ಪುದುಪಟ್ಟಣಂ ಗ್ರಾಮದ ನಿವಾಸಿ ವೀರಮುತ್ತು ಬಾಡಿಗೆ ಕಾರಿನಲ್ಲಿ ತನ್ನ ಪತ್ನಿ, 7 ವರ್ಷದ ಮಗ ಕೆವಿನ್ ಮತ್ತು ಇತರ ಇಬ್ಬರೊಂದಿಗೆ ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಈ ಕಾರನ್ನು ವಿಘ್ನೇಶ್ ಎಂಬ ವ್ಯಕ್ತಿ ಚಲಾಯಿಸುತ್ತಿದ್ದರು. ಅವರ ಮುಂದೆ ಸುರೇಶ್ ಎಂಬುವವರು ಚಲಾಯಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಅಪಘಾತ ಸಂಭವಿಸಿತ್ತು. ಆಗ ಬಾಡಿಗೆ ಕಾರಿನಲ್ಲಿದ್ದ ಏರ್‌ಬ್ಯಾಗ್ ಸ್ಫೋಟಗೊಂಡಿತು. ದುರಂತವೆಂದರೆ, ಈ ವೇಳೆ ಏರ್​ಬ್ಯಾಗ್ ಮುಂಭಾಗದ ಸೀಟಿನಲ್ಲಿ ತನ್ನ ತಂದೆಯ ಮಡಿಲಲ್ಲಿ ಕುಳಿತಿದ್ದ ಬಾಲಕ ಕವಿನ್ ಮುಖಕ್ಕೆ ಬಡಿಯಿತು. ಆಗ ಆತ ನೋವಿನಿಂದ ತಕ್ಷಣ ಪ್ರಜ್ಞೆ ತಪ್ಪಿದನು.  ಆ ಮಗುವನ್ನು ಆಸ್ಪತ್ರೆಗೆ ತಲುಪಿಸಿದಾಗ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.

ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೀವ ಉಳಿಸುವ ಏರ್‌ ಬ್ಯಾಗ್‌ ನಿಂದಾಗಿ ಒಂದು ಜೀವ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ