“ನಂಬಿಕೆ ಇರುವವರಿಗೆ” ದೀಪಾವಳಿ ಶುಭಾಶಯಗಳು ಎಂದ ಉದಯನಿಧಿ ಸ್ಟಾಲಿನ್!

ಚೆನ್ನೈ: “ನಂಬಿಕೆ ಇರುವವರಿಗೆ” ದೀಪಾವಳಿ ಶುಭಾಶಯಗಳು ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್(Udayanidhi Stalin) ಶುಭ ಹಾರೈಸಿದ್ದಾರೆ.
ಭಾನುವಾರ ದೀಪಾವಳಿ ಹಿನ್ನೆಲೆ ಡಿಎಂಕೆ ಪರವಾಗಿ ಚೆನ್ನೈನಲ್ಲಿ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ ಹೇಳಿಕೆಗಳಿಂದ ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ.
ಹಿರಿಯ ಬಿಜೆಪಿ ನಾಯಕಿ ಮತ್ತು ಮಾಜಿ ರಾಜ್ಯಪಾಲೆ ತಮಿಳಿಸೈ ಸೌದರಾಜನ್ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ದೀಪಾವಳಿ ಶುಭಾಶಯ ಕೋರಿದರು.
ಅವರು ಒಪ್ಪುತ್ತಾರೋ ಇಲ್ಲವೋ ಎಂಬುದು ನಮಗೆ ಬೇಡ ಇದು ಹಿಂದೂಗಳ ಹಬ್ಬ ಎಂದು ಹೇಳಿದರು. ಹಿಂದೂಗಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD