ನೀರು ತುಂಬಿದ್ದ ಬಕೆಟ್ ಗೆ ಬಿದ್ದು 14 ತಿಂಗಳ ಮಗು ಸಾವು! - Mahanayaka
10:37 AM Thursday 11 - December 2025

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 14 ತಿಂಗಳ ಮಗು ಸಾವು!

24/10/2025

ಹಾವೇರಿ: ನೀರು ತುಂಬಿದ್ದ ಬಕೆಟ್ ಗೆ ಬಿದ್ದು  14 ತಿಂಗಳ ಮಗು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿಯ ಶಿವಬಸವನಗರದಲ್ಲಿ ನಡೆದಿದೆ.

14 ತಿಂಗಳ ದಕ್ಷಿತ್ ಮೃತಪಟ್ಟ ಮಗುವಾಗಿದೆ. ವರದಿಗಳ ಪ್ರಕಾರ, ಮನೆಯ ಮುಂಭಾಗದಲ್ಲಿ ಅ.19ರಂದು ಮಗು ಆಟವಾಡುತ್ತಿತ್ತು. ಬಳಿಕ ಮನೆಯ ಎದುರು ನೀರು ತುಂಬಿದ್ದ ಬಕೆಟ್‌ ನಲ್ಲಿ ತಲೆ ಕೆಳಗಾಗಿ ಮಗು ಬಿದ್ದಿತ್ತು. ಅಲ್ಲಿಯೇ ಪ್ರಜ್ಞೆ ತಪ್ಪಿತ್ತು. ಬಕೆಟ್‌ ನಲ್ಲಿ ಮಗುವಿನ ಕಾಲು ನೋಡಿದ್ದ ಪೋಷಕರು ಹಾಗೂ ಸ್ಥಳೀಯರು, ಮಗುವನ್ನು ಮೇಲಕ್ಕೆ ಎತ್ತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದರು.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮಗು ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ