ಮತದಾರರಿಗೆ ಹಣ ಹಂಚುತ್ತಿದ್ದ ಶಂಕಿತ ಬಿಜೆಪಿ ಕಾರ್ಯಕರ್ತನಿಗೆ ಚಪ್ಪಲಿಯೇಟು! - Mahanayaka
10:55 AM Saturday 23 - August 2025

ಮತದಾರರಿಗೆ ಹಣ ಹಂಚುತ್ತಿದ್ದ ಶಂಕಿತ ಬಿಜೆಪಿ ಕಾರ್ಯಕರ್ತನಿಗೆ ಚಪ್ಪಲಿಯೇಟು!

bjp
17/04/2021


Provided by

ಬೀದರ್: ಚುನಾವಣೆಯಲ್ಲಿ ಬಿಜೆಪಿ ಪರ ಮತ ಚುಲಾಯಿಸಬೇಕು ಎಂದು ಮತದಾರರಿಗೆ ಹಣ ಹಂಚುತ್ತಿದ್ದ ಶಂಕಿತ ಬಿಜೆಪಿ ಕಾರ್ಯಕರ್ತನಿಗೆ  ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ಚಪ್ಪಲಿಯೇಟು ಬಿದ್ದಿದ್ದು, ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಶಂಕಿತ ಬಿಜೆಪಿ ಕಾರ್ಯಕರ್ತ, ಬಿಜೆಪಿ ಅಭ್ಯರ್ಥಿ ಶರಣು ಸಲಹರ್ ಪರವಾಗಿ ಹಣ ಹಂಚುತ್ತಿದ್ದ ಎಂದು ತಿಳಿದು ಬಂದಿದೆ. ರಾಜಕೀಯ ಪಕ್ಷಗಳೇ ಜನರನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಚಪ್ಪಲಿಯಿಂದ ಆರೋಪಿಯನ್ನು ಥಳಿಸಿದ್ದಾರೆ.

ತಾಲೂಕಿನ ತ್ರೀಪುರಾಂತದಲ್ಲಿ ಆರೋಪಿಯು ಮತದಾರರಿಗೆ ಗಾಳ ಹಾಕಲು ಬಂದಿದ್ದಾನೆ. ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳಿಂದ ಎಚ್ಚರಗೊಂಡಿರುವ ಜನರು ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಶಂಕಿತ ಬಿಜೆಪಿ ಕಾರ್ಯಕರ್ತನಿಗೆ ಥಳಿಸಿರುವುದಕ್ಕಿಂತಲೂ ಜನರಲ್ಲಿ ಜಾಗೃತಿ ಮೂಡಿರುವುದು ಸಂತಸದ ವಿಚಾರವಾಗಿದೆ ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ.

ಹಣ ಹಂಚುತ್ತಿದ್ದ ಶಂಕಿತ ಬಿಜೆಪಿ ಕಾರ್ಯಕರ್ತನ ಕೈಯಲ್ಲಿದ್ದ ಹಣವನ್ನು ಕಿತ್ತೆಸೆದ ಜನರು ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚುನಾವಣಾ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಂದ ಸ್ಕ್ಯಾಡ್ ಹಾಗೂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದೆ.

 

ಇತ್ತೀಚಿನ ಸುದ್ದಿ