ಕೈದಿಗಾಗಿ ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಂಡು ಜೈಲಿನೊಳಗೆ ಸಾಗಿಸಲು ಯತ್ನ: ಜೈಲು ವೀಕ್ಷಕನ ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡಲು ಯತ್ನಿಸಿದ್ದ ಜೈಲು ವೀಕ್ಷಕ (ವಾರ್ಡನ್)ನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಅಮರ್ ಪ್ರಾಂಜೆ (29) ಸಿಕ್ಕಿಬಿದ್ದ ಜೈಲು ವೀಕ್ಷಕನಾಗಿದ್ದಾನೆ. ಎಂದಿನಂತೆ ಜೈಲಿನ ಪ್ರವೇಶದ್ವಾರದಲ್ಲಿ ಕೆಎಸ್ಐಎಸ್ಎಫ್ (KSISF) ಸಿಬ್ಬಂದಿ ತಪಾಸಣೆ ನಡೆಸಲು ಮುಂದಾದ ವೇಳೆ ಅಮರ್ ತಪಾಸಣೆಗೆ ನಿರಾಕರಿಸಿ ವಾಪಸ್ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡು ಸಿಬ್ಬಂದಿ ಆತನನ್ನು ಹಿಡಿದು ತಪಾಸಣೆ ನಡೆಸಿದ ವೇಳೆ ಒಳ ಉಡುಪಿನಲ್ಲಿ ಒಂದು ಸ್ಮಾರ್ಟ್ ಫೋನ್, ಇಯರ್ ಫೋನ್ ಪತ್ತೆಯಾಗಿದೆ. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆರೋಪಿಯನ್ನು ಮೊಬೈಲ್ ಸಮೇತ ಬಂಧಿಸಲಾಗಿದೆ. ಜೈಲು ಅಧೀಕ್ಷಕ ಹೆಚ್.ಎ ಪರಮೇಶ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿಗಳ ಪ್ರಕಾರ, ಅಮರ್ ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬರಿಂದ 20 ಸಾವಿರ ರೂ.ಗಳನ್ನ ಪಡೆದು ಹೊರಗಡೆಯಿಂದ ಮೊಬೈಲ್ ತಂದು ಕೊಡಲು ಮುಂದಾಗಿದ್ದೆ. ಅದರಂತೆ 10 ಸಾವಿರ ರೂ. ಮುಂಗಡ ಹಣ ಪಡೆದು ಮೊಬೈಲ್ ತಂದು ಒಳಗಡೆ ತಲುಪಿಸಲು ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ. ಅಮರ್ ಪ್ರಾಂಜೆ 2019ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀಕ್ಷಕನಾಗಿ ಕೆಲಸ ಮಾಡ್ತಿದ್ದ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























