ಬಿಹಾರ ಫಲಿತಾಂಶ: ಮೂರು ಲಕ್ಷ ಹೆಚ್ಚುವರಿ ಮತದಾರರು ಹೇಗೆ ಬಂದರು?: ದೀಪಾಂಕರ್ ಭಟ್ಟಾಚಾರ್ಯ ಪ್ರಶ್ನೆ
ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ವಾಸ್ತವತೆಗೆ ಯಾವುದೇ ರೀತಿಯಲ್ಲೂ ಹೊಂದಾಣಿಕೆ ಆಗ್ತಾ ಇಲ್ಲ ಎಂದು ಸಿಪಿಐ(ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ (Dipankar Bhattacharya) ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 7.42 ಕೋಟಿ ಹೆಸರುಗಳಿವೆ. ಆದರೆ, ಚುನಾವಣೆಯ ನಂತರ ಬಿಡುಗಡೆಗೊಂಡ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯಲ್ಲಿ 7,45,26,858 ಮತದಾರರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಮೂರು ಲಕ್ಷ ಹೆಚ್ಚಿನ ಮತದಾರರ ಸಂಖ್ಯೆ ಹೆಚ್ಚಳ ಹೇಗಾಯ್ತು? ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡುವುದಿಲ್ಲವೇ ಅಂತ ಅವರು ಪ್ರಶ್ನೆ ಮಾಡಿದ್ದಾರೆ.
ದೀಪಾಂಕರ್ ಭಟ್ಟಾಚಾರ್ಯ ಅವರು ಬಿಹಾರ ಚುನಾವಣಾ ಫಲಿತಾಂಶ ಅಸ್ವಾಭಾವಿಕವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರಲ್ಲದೇ, ಇದು ಬಿಹಾರದ ವಾಸ್ತವಕ್ಕೆ ಹೊಂದಾಣಿಕೆ ಆಗ್ತಾ ಇಲ್ಲ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























