ಮೂಡಿಗೆರೆ: ಪಲ್ಗುಣಿ ಗ್ರಾಮದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ - Mahanayaka

ಮೂಡಿಗೆರೆ: ಪಲ್ಗುಣಿ ಗ್ರಾಮದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ

mudigere
23/11/2025

ಮೂಡಿಗೆರೆ: ಪಲ್ಗುಣಿ ಗ್ರಾಮದ ಜನರು ಕಳೆದ ಮೂರು ವರ್ಷಗಳಿಂದ ಅಶುದ್ಧ ನೀರು ಕುಡಿಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಗ್ರಾಮದಲ್ಲಿ ಬಾವಿಯಿಂದ ಟ್ಯಾಂಕ್‌ ಗಳಿಗೆ ನೀರು ಸಂಪರ್ಕ ಕಲ್ಪಿಸದೆ, ಹೇಮಾವತಿ ನದಿಯ ನೀರನ್ನು ನೇರವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನದಿಯಲ್ಲಿ ಮಳೆಗಾಲದಲ್ಲಿ ಬರುವ ಕೊಳಕು, ಮಣ್ಣು, ಕಸ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಸೇರಿರುವ ಸಾಧ್ಯತೆ ಹೆಚ್ಚಿದೆ.  ಇದರ ನಡುವೆ, ನದಿಯ ತೀರದಲ್ಲಿ ಮೃತಪಟ್ಟಿದ್ದ ನಾಯಿ ವಾರಗಳಾದರೂ ಯಾವುದೂ ಇಲಾಖೆಯವರು ತೆಗೆದು ಹಾಕದಿರುವುದು ಗ್ರಾಮಸ್ಥರಲ್ಲಿ ಭೀತಿಯನ್ನೂ, ಅಸಮಾಧಾನವನ್ನೂ ಹೆಚ್ಚಿಸಿದೆ. “ಮಾನವ ಜೀವಕ್ಕೆ ಯಾರಿಗೂ ಬೆಲೆ ಇಲ್ಲವೇ?” ಎಂದು ಜನತೆ ಪ್ರಶ್ನೆ ಮಾಡಿದ್ದಾರೆ.

ತುರ್ತು ಪರಿಹಾರಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಸಾರ್ವಜನಿಕ ಆರೋಗ್ಯ ಹಾಗೂ ಪಾನೀಯ ಜಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಶುದ್ಧ ನೀರಿನ ವ್ಯವಸ್ಥೆ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ