ಅಪರಿಚಿತ ವಾಹನ ಡಿಕ್ಕಿ: ತಂಗಿಯ ಮದುವೆ ಸಂಭ್ರಮದಲ್ಲಿದ್ದ ಅಣ್ಣನ ಸಹಿತ ಇಬ್ಬರು ಸಾವು - Mahanayaka
1:14 PM Thursday 27 - November 2025

ಅಪರಿಚಿತ ವಾಹನ ಡಿಕ್ಕಿ: ತಂಗಿಯ ಮದುವೆ ಸಂಭ್ರಮದಲ್ಲಿದ್ದ ಅಣ್ಣನ ಸಹಿತ ಇಬ್ಬರು ಸಾವು

bike accident
27/11/2025

ಹಾಸನ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುತ್ತಗನ್ನೆ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ. ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಚಿಕ್ಕಮಗಳೂರು ಜಿಲ್ಲೆ, ರಾಮೇನಹಳ್ಳಿ ಗ್ರಾಮದ ಕಿರಣ್ (32) ಮೃತಪಟ್ಟವರಾಗಿದ್ದಾರೆ.

ಮೃತಪಟ್ಟ ಲೋಕೇಶ್ ಅವರ ತಂಗಿಯ ಆರತಕ್ಷತೆ ಇಂದು ಆಯೋಜಿಸಲಾಗಿತ್ತು. ಹೀಗಾಗಿ ಮಜ್ಜಿಗೆ ಮಾಡಲು ಮೊಸರು ತರಲೆಂದು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಲೋಕೇಶ್ ಹಾಗೂ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರ ಮಾಹಿತಿಯ ಮೇರೆಗೆ  ಸ್ಥಳಕ್ಕೆ ಪಿಎಸ್‌ಐ ಪಾಟೀಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ