ಖಾಸಗಿ ವಿಡಿಯೋ ಲೀಕ್: ಕ್ಷಮೆಯಾಚಿಸಿದ ಸೋಷಿಯಲ್ ಮೀಡಿಯಾ ಕ್ರಿಯೇಟರ್ಸ್ ಜೋಡಿ!
ಸೋಷಿಯಲ್ ಮೀಡಿಯಾ ಕ್ರಿಯೇಟರ್ಸ್ ಜೋಡಿಯ ಖಾಸಗಿ ವಿಡಿಯೋವೊಂದು ವೈರಲ್ ಆಗಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ಜೋಡಿ ಸಾರ್ವಜನಿಕರ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ಈ ಸಂಬಂಧ ದೂರು ಕೂಡ ದಾಖಲಿಸಲಾಗಿದೆ.
ಕಂಟೆಂಟ್ ಕ್ರಿಯೇಟರ್ಸ್ ಆಗಿರುವ ಸೋಫಿಕ್ ಎಸ್.ಕೆ. ಹಾಗೂ ದುಸ್ತು ಸೋನಾಲಿ ಅವರ 15 ನಿಮಿಷಗಳ ಖಾಸಗಿ ವಿಡಿಯೋ ವೈರಲ್ ಆಗಿದೆ. ತಮ್ಮ ಸ್ನೇಹಿತರೇ ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ್ದಾರೆ. “ಅವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದರು, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ” ಎಂದು ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದಾರೆ.
ಇವರಿಬ್ಬರು ಬೆಂಗಾಳಿ ಮೂಲದ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಲಕ್ಷಾಂತರ ಜನರು ಫಾಲೋವರ್ಸ್ ನ್ನು ಹೊಂದಿದ್ದಾರೆ. ಡಾನ್ಸ್, ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದು ಮೊದಲಾದ ವಿಡಿಯೋಗಳನ್ನು ಇವರು ಮಾಡುತ್ತಿದ್ದರು.
ಸದ್ಯ ತಮ್ಮ ವಿಡಿಯೋ ವೈರಲ್ ಮಾಡಿದ ಸ್ನೇಹಿತನ ವಿರುದ್ಧ ಸೈಬರ್ ಪೊಲೀಸರ ಬಳಿ ಪ್ರಕರಣ ದಾಖಲಿಸಿದ್ದೇವೆ. ವೈರಲ್ ವಿಡಿಯೋವು ನಮ್ಮ ಜೀವನವನ್ನು ಹಾಳು ಮಾಡಿದೆ. ನಮಗೆ ಸಾರ್ವಜನಿಕವಾಗಿ ಹೋಗಲು ಸಾಧ್ಯವಾಗುತ್ತಿಲ್ಲ, ನಮಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ಅವರು ಅಳವತ್ತುಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























