ಮದುವೆಯಾಗಿ ಐದೇ ತಾಸಿನಲ್ಲಿ ವಿಚ್ಛೇದನ: ವರನ ಮನೆಗೆ ಬಂದ ವಧುವಿಗೆ ಆಗಿದ್ದೇನು?
ದೇವರಿಯಾ: ಉತ್ತರ ಪ್ರದೇಶದ ದೇವರಿಯಾ ಗ್ರಾಮದಲ್ಲಿ ಮದುವೆಯಾದ ಜೋಡಿಯೊಂದು ಮದುವೆಯಾಗಿ ಕೇವಲ 5 ತಾಸಿನಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ.
ವಿಶಾಲ್ ಹಾಗೂ ಪೂಜಾ ಎಂಬ ಜೋಡಿ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿತ್ತು. ವಧುವನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವೂ ಆಗಿತ್ತು. ಮನೆಗೆ ಹೋದ ಬಳಿಕ ವಧು ಕೋಣೆಯಿಂದ ಹೊರಬಂದು, ನಾನು ಇಲ್ಲಿರುವುದಿಲ್ಲ ತವರು ಮನೆಗೆ ಹೋಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ.
ಮೊದಲಿಗೆ ವಧು ತಮಾಷೆಗೆ ಈ ರೀತಿ ಮಾಡುತ್ತಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ, ಆಕೆ ತನ್ನ ಹೆತ್ತವರಿಗೂ ಕರೆ ಮಾಡಿ, ನಾನು ಇಲ್ಲಿರುವುದಿಲ್ಲ ಎಂದು ಹೇಳಿದ ವೇಳೆ ಆಕೆ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾಳೆ ಎನ್ನುವುದು ಬಯಲಾಗಿದೆ.
ವಿಶಾಲ್ ಕುಟುಂಬವು ಪೂಜಾಳ ಕುಟುಂಬಕ್ಕೆ ಕರೆ ಮಾಡಿ ಆಕೆಯ ನಿರ್ಧಾರವನ್ನು ತಿಳಿಸಿದೆ. ಅವರು ಆಕೆಯ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ತನ್ನ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಗ್ರಾಮದಲ್ಲಿ ಪಂಚಾಯತ್ ಕರೆಯಲಾಗಿದೆ. ಅಲ್ಲಿ ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಕ್ಯಾನ್ಸಲ್ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು. ಮದುವೆಗೆ ನೀಡಲಾದ ಎಲ್ಲ ಉಡುಗೊರೆಗಳನ್ನೂ ಹಿಂದಿರುಗಿಸಲಾಯಿತು. ವಧು ತನ್ನ ಕುಟುಂಬದೊಂದಿಗೆ ತನ್ನ ಮನೆ ಸೇರಿದ್ದಾಲೆ.
ಅಂದ ಹಾಗೆ, ವಧುವಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಮದುವೆಗೆ ಮುನ್ನ ಕೂಡ ಪೂಜಾ, ವಿಶಾಲ್ ಜೊತೆಗೆ ಮಾತನಾಡಿರಲಿಲ್ಲ, ಆತನೊಂದಿಗೆ ಮಾತನಾಡಲೇ ಆಕೆಗೆ ಇಷ್ಟವಿರಲಿಲ್ಲ, ತನ್ನ ತಂದೆ ತಾಯಿಯ ಒತ್ತಡಕ್ಕೆ ಮದುವೆಯಾಗಿದ್ದಳು. ಆದರೆ, ಮದುವೆಯ ನಂತರವೂ ಆಕೆಗೆ ಆತ ಇಷ್ಟವಾಗಲಿಲ್ಲ, ಹೀಗಾಗಿ ತಾನು ತವರು ಮನೆಗೆ ಹೋಗುವುದಾಗಿ ಪಟ್ಟು ಹಿಡಿದಳು ಮತ್ತು ಸಂಬಂಧವನ್ನು ಕೊನೆಗೊಳಿಸಿದಳು ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























