ಡೆವಿಲ್ ದರ್ಶನ್ ಗೆ ಸುಳ್ಳು ಸುದ್ದಿಗಳ ಕಾಟ!
ಬೆಂಗಳೂರು: ದರ್ಶನ್(ಡಿಬಾಸ್) ನಟನೆಯ ಡೆವಿಲ್, ಅಭಿಮಾನಿಗಳ ಸಹಕಾರದೊಂದಿಗೆ ಭರ್ಜರಿ ಗೆಲುವು ದಾಖಲಿಸಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲೂ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ, ಡೆವಿಲ್ ಸಿನಿಮಾ ಥಿಯೇಟರ್ ಗೆ ಕಾಲಿಡುವುದಕ್ಕೂ ಮುಂಚೆ, ನಟ ದರ್ಶನ್ ಅವರಿಗೆ ಸುಳ್ಳು ಸುದ್ದಿಗಳ ಕಾಟ ಕಾಡಿದೆ.
ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಿ ಕೆಲವು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡುತ್ತಿರುವುದು ಈ ಹಿಂದಿನಿಂದಲೇ ನಡೆಯುತ್ತಿತ್ತು. ಅದರಂತೆ ಡೆವಿಲ್ ಸಿನಿಮಾ ರಿಲೀಸ್ ನ ಸಂದರ್ಭದಲ್ಲಿ ಕೂಡ ಇಂತಹದ್ದೊಂದು ಪ್ರಯತ್ನ ನಡೆಯಿತು.
ನಟ ದರ್ಶನ್ ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ, ಒದ್ದಿದ್ದಾರೆ, ಸಹ ಕೈದಿಗಳಿಗೆ ನೆಮ್ಮದಿ ಕೊಡ್ತಾ ಇಲ್ವಂತೆ, ಹಾಗಂತೆ ಹೀಗಂತೆ ಎನ್ನುವ ಅಂತೆ ಕಂತೆಗಳ ಸುದ್ದಿ ವೈರಲ್ ಆಗಿತ್ತು. ಸದ್ಯದ ಮಾಹಿತಿಗಳ ಪ್ರಕಾರ, ಈ ಸುದ್ದಿ ವೈರಲ್ ಆಗ್ತಿದ್ದಂತೆಯೇ ಜೈಲಿನ ಅಧಿಕಾರಿಗಳು ತಕ್ಷಣವೇ ದರ್ಶನ್ ಅವರ ಬ್ಯಾರಕ್ ಕಾಯುತ್ತಿದ್ದ ಸಿಬ್ಬಂದಿಗಳನ್ನ ಒಂದೊಂದಾಗಿ ವಿಚಾರಣೆ ನಡೆಸಿದ್ದಾರೆ. ಎಡಿಜಿಪಿ ಅವರಿಗೆ ಅವರು ಕೊಟ್ಟಿರೋ ಮಾಹಿತಿಗಳ ಪ್ರಕಾರ, ದರ್ಶನ್ ಅಲ್ಲಿ ಯಾರ ಮೇಲೂ ಸಣ್ಣ ದ್ವೇಷವನ್ನೂ ಸಾಧಿಸಿಲ್ಲ. ಅಲ್ಲಿ ಯಾವುದೇ ಗಲಾಟೆ ನಡೆದಿಲ್ಲ, ದರ್ಶನ್ ಅವರು ಸಹ ಕೈದಿಗಳ ಜೊತೆ ಮತ್ತು ಸಿಬ್ಬಂದಿ ಜೊತೆ ತುಂಬಾನೇ ಕೂಲ್ ಆಗಿದ್ರು. ಹಲ್ಲೆ ನಡೆದಿದೆ ಅನ್ನೋದೆಲ್ಲಾ ಶುದ್ಧ ಸುಳ್ಳು ಅಂತ ಅಧಿಕಾರಿಗಳೇ ಹೇಳಿದ್ದಾರೆ ಎನ್ನಲಾಗಿದೆ.
ಸಿನಿಮಾ ರಿಲೀಸ್ ನ ಖುಷಿಯಲ್ಲಿದ್ದ ನಟ ದರ್ಶನ್ ಅವರಿಗೆ ಸುಳ್ಳು ಸುದ್ದಿಗಳ ಕಾಟ ಬೆಂಬಿಡದೇ ಕಾಡುತ್ತಿದೆ. ನಟ ದರ್ಶನ್ ಒಬ್ಬ ಸಾಮಾನ್ಯ ಕೈದಿಯಂತೆ ಶಿಸ್ತಿನಿಂದ ಜೈಲಿನಲ್ಲಿದ್ದಾರೆ. ಆದ್ರೆ ಅವರ ಬಗ್ಗೆ ಇಲ್ಲಸಲ್ಲದ ಅಪ ಪ್ರಚಾರ ನಡೆಸುತ್ತಿರೋದ್ಯಾಕೆ ಅನ್ನೋ ಆಕ್ರೋಶದ ಮಾತುಗಳನ್ನು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























