ಕರ್ನಾಟಕ ಡಿಎಸ್ ಎಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 69ನೇಯ ಪರಿನಿಬ್ಬಾಣ ದಿನಾಚರಣೆ - Mahanayaka

ಕರ್ನಾಟಕ ಡಿಎಸ್ ಎಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 69ನೇಯ ಪರಿನಿಬ್ಬಾಣ ದಿನಾಚರಣೆ

dss
15/12/2025

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ( ರಿ ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ ತಾಲೂಕು ಶಾಖೆ ಮಂಗಳೂರು ಇದರ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇಯ ಪರಿನಿಬ್ಬಾಣ ದಿನವನ್ನು ಭಾನುವಾರ ಬೆಳಿಗ್ಗೆ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಭವನ ಸಿದ್ಧಾರ್ಥ ನಗರ ಬಜ್ಪೆ ಇಲ್ಲಿ ಆಚರಿಸಲಾಯಿತು.

ತಾಲೂಕು ಸಂಚಾಲಕರಾದ ರಾಘವೇಂದ್ರ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕರಾದಂತ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಎಚ್.ಡಿ.ಲೋಹಿತ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಮಂಗಳೂರು ವಿಮಾನ ನಿಲ್ದಾಣ ಪುನರ್ ನಿರ್ವಸಿತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಕಪ್ಪ ಕಾಂಚನ್, ದಲಿತ ಕಲಾಮಂಡಳಿ ಜಿಲ್ಲಾ ಸಂಚಾಲಕ ಕಮಲಾಕ್ಷ ಬಜಾಲ್, ಸಿದ್ದಾರ್ಥ ನಗರ ಗ್ರಾಮ ಸಂಘಟನಾ ಸಂಚಾಲಕರಾದ ರವೀಂದ್ರ ಕೋಟ್ಯಾನ್, ಪೂರ್ಣಿಮಾ ಮುಳ್ಳೊಟ್ಟು, ರಾಧಾ ಪೇಜಾವರ, ಹಾಗೂ ವಿವಿಧ ಗ್ರಾಮ ಶಾಖೆಗಳ ಸಂಚಾಲಕರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕು ಕಲಾ ಮಂಡಳಿ ಸಂಚಾಲಕರಾದ ಗಂಗಾಧರ ಕೋಟ್ಯಾನ್,ತಾಲೂಕು ಸಮಿತಿ ತಾಲೂಕು ಸಮಿತಿ ಖಜಾಂಚಿ ರುಕ್ಕಯ ಅಮೀನ್  ಸ್ವಾಗತಿಸಿ, ಕೃಷ್ಣ ಕೆ. ಎಕ್ಕಾರು. ತಾರಾಕ್ಷಿ ಎಂ.ಬಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ