ರಾಜಧಾನಿಗೆ ತಟ್ಟಿತು ಲಾಕ್ ಬಿಸಿ! |  ಏನೆಲ್ಲ ಇದೆ? ಏನೆಲ್ಲ ಇರುವುದಿಲ್ಲ? - Mahanayaka

ರಾಜಧಾನಿಗೆ ತಟ್ಟಿತು ಲಾಕ್ ಬಿಸಿ! |  ಏನೆಲ್ಲ ಇದೆ? ಏನೆಲ್ಲ ಇರುವುದಿಲ್ಲ?

delhi lockdown
19/04/2021


Provided by

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ  ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಇಂದು ರಾತ್ರಿಯಿಂದ ಏಪ್ರಿಲ್ 26ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಇದೇ ಸಂದರ್ಭದಲ್ಲಿ ಏನೆಲ್ಲ ಸೌಲಭ್ಯಗಳು ಇವೆ, ಏನೆಲ್ಲ ಸೌಲಭ್ಯಗಳು ಇಲ್ಲ ಎನ್ನುವ ಮಾಹಿತಿ ಇಲ್ಲಿದೆ.

ಅಗತ್ಯ ಸೇವೆ, ವೈದ್ಯಕೀಯ ವಲಯಕ್ಕೆ ಸಂಬಂಧಪಟ್ಟ ರಾಜ್ಯ ಕಚೇರಿಗಳನ್ನು ಹೊರತುಪಡಿಸಿ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುತ್ತದೆ.  ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ವರ್ಕ್ ಫ್ರಂ ಹೋಮ್ ಮಾಡಿಸಬೇಕು.ಮದುವೆ ಸಮಾರಂಭಕ್ಕೆ 50 ಜನರು ಮಾತ್ರವೇ ಭಾಗವಹಿಸಬೇಕು.

ಮಾಲ್ ಗಳು, ಸಿನಿಮಾ ಮಂದಿರಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಸ್ವಿಮ್ಮಿಂಗ್ ಪೂಲ್ ಗಳು, ರೆಸ್ಟೋರೆಂಟ್, ಸೆಲೂನ್, ಜಿಮ್ ಗಳು ಮತ್ತು ಸ್ಪಾಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಸಾಮಾಜಿಕ, ರಾಜಕೀಯ, ಕ್ರೀಡಾ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ರಾಷ್ಟ್ರೀಯ ಕ್ರೀಡೆಗಳನ್ನು ವೀಕ್ಷಕರಿಲ್ಲದೇ ನಡೆಸಬೇಕು.  ದೇವಸ್ಥಾನಗಳು ತೆರೆದಿರುತ್ತವೆ. ಆದರೆ ಭಕ್ತರಿಗೆ ಅವಕಾಶವಿಲ್ಲ.

ಆಹಾರ, ದಿನಸಿ, ಹಣ್ಣು, ತರಕಾರಿ,  ಹಾಲಿನ ಬೂತ್ ಗಳು, ಡೈರಿಗಳು ಮೀನು ಮತ್ತು ಮಾಂಸ, ಮೆಡಿಕಲ್ ಗಳು, ಪತ್ರಿಕಾ ವಿತರಣಾ ಕೇಂದ್ರಗಳಿಗೆ ನಿರ್ಬಂಧ ಇಲ್ಲ. ಹಾಗೆಯೇ ಬ್ಯಾಂಕ್, ಇನ್ಸೂರೆನ್ಸ್ ಆಫೀಸ್, ಎಟಿಎಂ, ಟೆಲಿಕಮ್ಯುನಿಕೇಷನ್, ಇಂಟರ್ ನೆಟ್ ಸರ್ವೀಸ್, ಕೇಬಲ್ ಸರ್ವಿಸ್, ಐಟಿ ಸಂಬಂಧ ಪಟ್ಟ ಸೇವೆಗಳು,  ಪೆಟ್ರೋಲ್ ಬಂಕ್ ಗಳು, ಎಲ್ ಪಿಜಿ, ಸಿಎನ್ ಸಿ, ಪೆಟ್ರೋಲಿಯಂ ಮತ್ತು ಗ್ಯಾಸ್ ರೀಟೇಲ್ ಮತ್ತು ಸ್ಟೋರೇಜ್ ಕೇಂದ್ರಗಳು, ನೀರು ಸರಬರಾಜು ಸಂಸ್ಥೆಗಳು, ಪವರ್ ಜನರೇಷನ್, ಕೋಲ್ಡ್ ಸ್ಟೋರೇಜ್ ಮತ್ತು ವಾಟರ್ ಹೌಸ್ ಸೇವೆ, ಖಾಸಗಿ ಸೆಕ್ಯುರಿಟಿ ಸರ್ವೀಸ್, ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಇತ್ತೀಚಿನ ಸುದ್ದಿ