ವೇಣೂರು:  ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ: ವಿಜ್ಞಾಪನಾ ಪತ್ರ ಬಿಡುಗಡೆ - Mahanayaka
8:40 AM Saturday 10 - January 2026

ವೇಣೂರು:  ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ: ವಿಜ್ಞಾಪನಾ ಪತ್ರ ಬಿಡುಗಡೆ

adhi shakti
09/01/2026

ಬೆಳ್ತಂಗಡಿ: ತಾಲೂಕಿನ ವೇಣೂರು ಗ್ರಾಮದ ಶಿವಾಜಿ ನಗರದ ಜನತಾ ಕಾಲೋನಿಯ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದ ಜೀರ್ಣೋದ್ದಾರ ಮತ್ತು ಅಭಿವೃದ್ದಿಯ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಗಣಹೋಮ, ಸರಸ್ವತಿ ಪೂಜೆ, ಶ್ರೀದೇವಿ ಆದಿಶಕ್ತಿ ಅಮ್ಮನವರಿಗೆ ಮಹಾಪೂಜೆಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಭಜನಾ ಮಂದಿರದ ಆದಿಶಕ್ತಿ ಕಲಾ ಭವನದಲ್ಲಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯರಾಮ ಶೆಟ್ಟಿ ಖಂಡಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿಜಯ ಗೌಡ, ಗ್ರಾ. ಪಂ. ಸದಸ್ಯರಾದ ಲೋಕಯ್ಯ ಪೂಜಾರಿ, ಗ್ರಾ. ಪಂ. ಸದಸ್ಯರಾದ ಸತೀಶ್ ಹೆಗ್ಡೆ, ಗ್ರಾ ಪಂ. ಸದಸ್ಯರಾದ ನೇಮಯ್ಯ ಕುಲಾಲ್, ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ವೇಣೂರು ವಲಯ ಮೇಲ್ವಿಚಾರಕರಾದ ಶಾಲಿನಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ವಲಯ ಸೇವಾ ಪ್ರತಿನಿಧಿಯಾದ  ಜಯಂತಿ, ಭಜನಾ ಮಂದಿರದ ಸಂಚಾಲಕರಾದ ಶಂಕರ. ಎಸ್, ಗೌರವಾಧ್ಯಕ್ಷರಾದ ಶಿವಪ್ಪ ಕೊಳಚಲ, ಅಧ್ಯಕ್ಷರಾದ ಯೋಗೀಶ್  ಕೆ.ಬಿ. ಉಪಸ್ಥಿತರಿದ್ದರು.

 

ಪ್ರಾಸ್ತಾವಿಕ ಭಾಷಣವನ್ನು ಸಂಚಾಲಕರಾದ ಶಂಕರ ಎಸ್. ನೆರವೇರಿಸಿದರು . ಸದಾಶಿವ ಡಿ.  ಸ್ವಾಗತಿಸಿದರು,  ಶೇಖರ್ ವಿ.ಜಿ. ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ