ಟೊಯೋಟಾದಿಂದ ಶಾಕಿಂಗ್ ನ್ಯೂಸ್! ಇನ್ನೋವಾ ಕ್ರಿಸ್ಟಾ ಪ್ರಿಯರೇ ಎಚ್ಚರ, ಇನ್ನೊಂದೇ ವರ್ಷದಲ್ಲಿ ಈ ಕಾರು ಸಿಗಲ್ಲ!
ವಾಹನ ಮಾರುಕಟ್ಟೆಯಲ್ಲಿ ಕಳೆದ ಎರಡು ದಶಕಗಳಿಂದ ಏಕಚಕ್ರಾಧಿಪತ್ಯ ನಡೆಸಿದ್ದ ಟೊಯೋಟಾ ಕಂಪನಿಯ ಅತ್ಯಂತ ಜನಪ್ರಿಯ ಎಂಪಿವಿ (MPV) ಕಾರು ‘ಇನ್ನೋವಾ ಕ್ರಿಸ್ಟಾ’ (Innova Crysta) ಉತ್ಪಾದನೆಯನ್ನು ಸ್ಥಗಿತಗೊಳಿಸಲು ಟೊಯೋಟಾ ನಿರ್ಧರಿಸಿದೆ. ಈ ಸುದ್ದಿಯು ಕಾರು ಪ್ರೇಮಿಗಳಿಗೆ, ಅದರಲ್ಲೂ ವಿಶೇಷವಾಗಿ ಟ್ಯಾಕ್ಸಿ ಮಾಲೀಕರಿಗೆ ಮತ್ತು ರಾಜಕಾರಣಿಗಳಿಗೆ ದೊಡ್ಡ ಶಾಕ್ ನೀಡಿದೆ.
- ಡೆಡ್ ಲೈನ್ ಫಿಕ್ಸ್: ವರದಿಗಳ ಪ್ರಕಾರ, 2027ರ ಮಾರ್ಚ್ ತಿಂಗಳಿನಲ್ಲಿ ಕೊನೆಯ ಇನ್ನೋವಾ ಕ್ರಿಸ್ಟಾ ಡೀಸೆಲ್ ಕಾರು ಫ್ಯಾಕ್ಟರಿಯಿಂದ ಹೊರಬರಲಿದೆ. ಅಲ್ಲಿಗೆ ಈ ಐಕಾನಿಕ್ ಕಾರಿನ ಉತ್ಪಾದನೆ ಅಧಿಕೃತವಾಗಿ ಬಂದ್ ಆಗಲಿದೆ.
- ಯಾಕೀ ಕಠಿಣ ನಿರ್ಧಾರ?: ಈ ಯಶಸ್ವಿ ಕಾರನ್ನು ನಿಲ್ಲಿಸಲು ಪ್ರಮುಖವಾಗಿ ಸರ್ಕಾರದ ಹೊಸ ಪರಿಸರ ನಿಯಮಗಳೇ ಕಾರಣ.
- CAFE III ನಿಯಮ: ಭಾರತ ಸರ್ಕಾರವು 2027 ರಿಂದ ಜಾರಿಗೆ ತರುತ್ತಿರುವ ಕಟ್ಟುನಿಟ್ಟಿನ ‘ಕಾರ್ಪೊರೇಟ್ ಆವರೇಜ್ ಫ್ಯೂಲ್ ಎಫಿಷಿಯನ್ಸಿ’ (CAFE) ನಿಯಮದಂತೆ, ಕಂಪನಿಯು ಉತ್ಪಾದಿಸುವ ಎಲ್ಲಾ ಕಾರುಗಳ ಸರಾಸರಿ ಕಾರ್ಬನ್ ಹೊರಸೂಸುವಿಕೆ ಪ್ರತಿ ಕಿ.ಮೀ ಗೆ 91.7 ಗ್ರಾಂ ಇರಬೇಕು. ಆದರೆ ಕ್ರಿಸ್ಟಾ ಬರೋಬರಿ 175 ಗ್ರಾಂ ಹೊಗೆ ಹೊರಹಾಕುತ್ತದೆ.
- ಭಾರಿ ದಂಡದ ಭೀತಿ: ನಿಯಮ ಮೀರಿದರೆ ಪ್ರತಿ ಕಾರಿಗೆ 25 ರಿಂದ 50 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇದು ಕಂಪನಿಗೆ ದೊಡ್ಡ ನಷ್ಟ ತರಲಿದೆ.
- ಹೆಚ್ಚುವರಿ ವೆಚ್ಚ: ಬಿಎಸ್-6 ಫೇಸ್ 2 ನಿಯಮಗಳಿಗೆ ತಕ್ಕಂತೆ ಹಳೆಯ ಡೀಸೆಲ್ ಇಂಜಿನ್ ಅಪ್ಗ್ರೇಡ್ ಮಾಡಿದರೆ ಕಾರಿನ ಬೆಲೆ 35 ಲಕ್ಷ ದಾಟಬಹುದು. ಇದರಿಂದ ಗ್ರಾಹಕರು ಹಿಂದೆ ಸರಿಯುವ ಸಾಧ್ಯತೆ ಇದೆ.
ಕ್ರಿಸ್ಟಾ ವರ್ಸಸ್ ಹೈಕ್ರಾಸ್: ಏನು ವ್ಯತ್ಯಾಸ?
ಟೊಯೋಟಾ ಈಗಾಗಲೇ ‘ಇನ್ನೋವಾ ಹೈಕ್ರಾಸ್’ ಬಿಡುಗಡೆ ಮಾಡಿದ್ದರೂ, ಜನ ಇಂದಿಗೂ ಕ್ರಿಸ್ಟಾವನ್ನೇ ಹುಡುಕುತ್ತಿದ್ದಾರೆ. ಇದಕ್ಕೆ ಕಾರಣ ಕ್ರಿಸ್ಟಾದಲ್ಲಿರುವ ‘ಲ್ಯಾಡರ್ ಫ್ರೇಮ್ ಚಾಸಿಸ್’ ಮತ್ತು ‘ರೇರ್ ವೀಲ್ ಡ್ರೈವ್’ ತಂತ್ರಜ್ಞಾನ. ಇದು ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಭಾರೀ ಲೋಡ್ ಹೊತ್ತೊಯ್ಯಲು ಹೆಚ್ಚು ಅನುಕೂಲಕರವಾಗಿದೆ. ಹೈಕ್ರಾಸ್ ಹೆಚ್ಚು ಐಷಾರಾಮಿಯಾಗಿದ್ದರೂ, ಕ್ರಿಸ್ಟಾದಷ್ಟು ರಗಡ್ ಆಗಿಲ್ಲ ಎಂಬುದು ಚಾಲಕರ ಅಭಿಪ್ರಾಯ.
ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಕ್ರಿಸ್ಟಾಕ್ಕೇ ಡಿಮ್ಯಾಂಡ್!
ಕ್ರಿಸ್ಟಾ ಉತ್ಪಾದನೆ ನಿಲ್ಲುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹಳೆಯ ಕ್ರಿಸ್ಟಾ ಕಾರುಗಳಿಗೆ ಬಂಗಾರದ ಬೆಲೆ ಬರುತ್ತಿದೆ. ಈಗಿರುವ ಕಾರನ್ನು ಮಾರಾಟ ಮಾಡಬೇಡಿ, ಅದು ‘ಬಂಗಾರದ ಮೊಟ್ಟೆ ಇಡುವ ಕೋಳಿ’ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.
ನೀವೇನಾದರೂ ಇನ್ನೋವಾ ಕ್ರಿಸ್ಟಾ ಖರೀದಿಸುವ ಪ್ಲಾನ್ ಮಾಡಿದ್ದರೆ, 2027ರ ಒಳಗೆ ಬುಕ್ ಮಾಡುವುದು ಉತ್ತಮ. ಆನಂತರ ಈ ‘ರಾಜಾಹುಲಿ’ಯ ಘರ್ಜನೆ ಹೊಸ ಕಾರುಗಳ ರೂಪದಲ್ಲಿ ಕೇಳಿಬರುವುದಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























