ಕೊರೊನಾದಿಂದಾಗಿ ಮುಚ್ಚಿದ್ದ ಸ್ಮಶಾನ ಮತ್ತೆ ತೆರೆಯಿತು | 10 ಗಂಟೆಗೆ ತಯಾರಾಗುತ್ತದೆ ಇಲ್ಲಿ ಚಿತೆ - Mahanayaka

ಕೊರೊನಾದಿಂದಾಗಿ ಮುಚ್ಚಿದ್ದ ಸ್ಮಶಾನ ಮತ್ತೆ ತೆರೆಯಿತು | 10 ಗಂಟೆಗೆ ತಯಾರಾಗುತ್ತದೆ ಇಲ್ಲಿ ಚಿತೆ

gujarath
21/04/2021


Provided by

ಸೂರತ್: ಪ್ರಧಾನಿ ನರೇಂದ್ರ ಮೋದಿಯ ತವರೂರು ಗುಜರಾತ್ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿರುವ ಸಾಲು ಸಾಲು ಮೃತದೇಹಗಳು ಸ್ಮಶಾನಕ್ಕೆ ಬರುತ್ತಿದ್ದು, ಇದರಿಂದಾಗಿ ಸ್ಮಶಾನದಲ್ಲಿ ಮೊದಲೇ ಚಿತೆಯನ್ನು ಸಿದ್ಧಪಡಿಸಲಾಗುತ್ತಿದೆ.

ಮೃತದೇಹಗಳ ದಹನಕ್ಕಾಗಿ 10 ಗಂಟೆಗಳ ಮುಂಚಿತವಾಗಿಯೇ ಚಿತೆಗಳನ್ನು ಸಿದ್ಧಪಡಿಸಲಾಗುತ್ತಿದೆ.  ಸಂಜೆ 7ರಿಂದ ಬೆಳಗ್ಗೆ 5ರವರೆಗೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಮೃತ ದೇಹಗಳ ಬರುವುದಕ್ಕೂ 10 ಗಂಟೆಗೂ ಮೊದಲೇ ಚಿತೆ ಸಿದ್ಧವಾಗಿರುತ್ತದೆ.

ಕೊವಿಡ್ ನಿಂದ ಅತೀ ಹೆಚ್ಚು ಸಾವು ಸಂಭವಿಸುತ್ತಿರುವುದರಿಂದ ಗುಜರಾತ್ ನಲ್ಲಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಸ್ಮಶಾನವನ್ನು ವಾಪಸ್ ತೆರೆಯಲಾಗಿದೆ. ಈ ಸ್ಮಶಾನದಲ್ಲಿ ಗ್ಯಾಸ್ದ ಚೇಂಬರ್ ನಲ್ಲಿ ಅಥವಾ ಉರುವಾಲು ಬಳಸಿ ಮಾಡಲಾಗುತ್ತಿದೆ. ಮೃತದೇಹಗಳ ದಹನಕ್ಕೆ ಕಬ್ಬಿನ ನಾರುಗಳನ್ನು ಸಯಾನ್ ಸಕ್ಕರೆ ಕಾರ್ಖಾನೆಯಿಂದ ಸೂರತ್ ನ ಶವಗಾರಕ್ಕೆ ಒದಗಿಸಲಾಗುತ್ತಿದೆ.

ಇತ್ತೀಚಿನ ಸುದ್ದಿ