ಬಿಪಿ, ಶುಗರ್ ಕಾಯಿಲೆಯಿಂದ ನೊಂದ ವೃದ್ಧನಿಂದ ದುಡುಕಿನ ನಿರ್ಧಾರ! - Mahanayaka

ಬಿಪಿ, ಶುಗರ್ ಕಾಯಿಲೆಯಿಂದ ನೊಂದ ವೃದ್ಧನಿಂದ ದುಡುಕಿನ ನಿರ್ಧಾರ!

vittal news
22/04/2021


Provided by

ವಿಟ್ಲ: ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದಲ್ಲಿ ನಡೆದಿದೆ.

75 ವರ್ಷ ವಯಸ್ಸಿನ ಬಾಬು ಆಚಾರ್ಯ ಮೃತಪಟ್ಟವರಾಗಿದ್ದಾರೆ. ಏಪ್ರಿಲ್ 21ರಂದು ರಾತ್ರಿ 10:30ರಿಂದ 22ರ ಬೆಳಗ್ಗೆ 7:30ರ ನಡುವೆ ಇವರು ತಮ್ಮ ಸಹೋದರನ ಮನೆಗೆ ತೆರಳಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಬು ಆಚಾರ್ಯ ಅವರು ಬಿಪಿ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಕಾಯಿಲೆಯ ಹಿನ್ನೆಲೆಯಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ