ಪತ್ನಿಗೆ ಉದ್ಯಮಿ ಜೊತೆಗೆ ಅಕ್ರಮ ಸಂಬಂಧ: ಅವಮಾನ ಸಹಿಸಲಾರದೇ ಪತಿ ಆತ್ಮಹತ್ಯೆಗೆ ಶರಣು: ಇಬ್ಬರ ಬಂಧನ
ಹೈದರಾಬಾದ್: ಪತ್ನಿಯ ಅಕ್ರಮ ಸಂಬಂಧ ಮತ್ತು ಅದರಿಂದ ಉಂಟಾದ ಮಾನಸಿಕ ಕಿರುಕುಳ ತಾಳಲಾರದೆ 36 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಎಸ್. ಸೀತಾರಾಮ್ ರೆಡ್ಡಿ ಎಂದು ಗುರುತಿಸಲಾಗಿದೆ. ಫೆಬ್ರವರಿ 9 ರಂದು ಹೈದರಾಬಾದ್ನ ಹುಸೇನ್ ಸಾಗರ್ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. ಸೀತಾರಾಮ್ ರೆಡ್ಡಿ ಅವರ ಪತ್ನಿ ರೇಣುಕಾ ಮತ್ತು ಆಕೆಯ ಪ್ರಿಯತಮ ಎಂ. ರಮಣ ರೆಡ್ಡಿ ಎಂಬುವವರನ್ನು ಪೊಲೀಸರು ಏಪ್ರಿಲ್ 21 ರಂದು ಬಂಧಿಸಿದ್ದಾರೆ.
ಸೀತಾರಾಮ್ ರೆಡ್ಡಿ ಅವರ ತಂದೆ ವೆಂಕಟೇಶ್ವರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಮಗನ ಸಾವಿಗೆ ಸೊಸೆ ರೇಣುಕಾ ಅವರ ಅಕ್ರಮ ಸಂಬಂಧವೇ ಕಾರಣ ಎಂದು ಆರೋಪಿಸಿದ್ದಾರೆ. ರೇಣುಕಾ ಉದ್ಯಮಿ ರಮಣ ರೆಡ್ಡಿ ಎಂಬಾತನೊಂದಿಗೆ ಸಂಬಂಧ ಹೊಂದಿದ್ದರು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಇತ್ತೀಚೆಗೆ ರೇಣುಕಾ ಮನೆಯಿಂದ ಹೊರಹೋಗಿದ್ದರು, ಈ ಬಗ್ಗೆ ಸೀತಾರಾಮ್ ರೆಡ್ಡಿ ಕಾಣೆಯಾದ ದೂರು ಕೂಡ ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಡಿಯೋವೊಂದು ಸೀತಾರಾಮ್ ಅವರಿಗೆ ತಲುಪಿತ್ತು, ಇದು ಅವರ ತೀವ್ರ ಮಾನಸಿಕ ನೆಮ್ಮದಿಗೆ ಭಂಗ ತಂದಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಚುಪಲ್ಲಿ ಪೊಲೀಸರು ತನಿಖೆ ನಡೆಸಿದಾಗ, ಪತ್ನಿಯ ವರ್ತನೆ ಮತ್ತು ಆಕೆಯ ಪ್ರಿಯತಮನ ಕಿರುಕುಳದಿಂದ ಸೀತಾರಾಮ್ ರೆಡ್ಡಿ ಮಾನಸಿಕವಾಗಿ ಕುಸಿದು ಹೋಗಿದ್ದರು ಎಂಬುದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ (Abetment to suicide) ರೇಣುಕಾ ಮತ್ತು ರಮಣ ರೆಡ್ಡಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ಸೀತಾರಾಮ್ ರೆಡ್ಡಿ ಮತ್ತು ರೇಣುಕಾ ಅವರಿಗೆ 2018 ರಲ್ಲಿ ಮದುವೆಯಾಗಿದ್ದು, ಇವರಿಗೆ ಐದು ಮತ್ತು ಏಳು ವರ್ಷದ ಇಬ್ಬರು ಮಕ್ಕಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























