ಮಾಸ್ಕ್ ಬದಲು ಗೀಜಗನ ಗೂಡು ಧರಿಸಿ ಬಂದ ವೃದ್ಧನ ನೋವಿನ ಕಥೆ ಏನು ಗೊತ್ತಾ? - Mahanayaka
4:09 PM Saturday 18 - October 2025

ಮಾಸ್ಕ್ ಬದಲು ಗೀಜಗನ ಗೂಡು ಧರಿಸಿ ಬಂದ ವೃದ್ಧನ ನೋವಿನ ಕಥೆ ಏನು ಗೊತ್ತಾ?

mekala kurmaiah
23/04/2021

ಮೆಹಬೂಬ್ ನಗರ: ಮಾಸ್ಕ್ ಧರಿಸಿ ಎಂದೆಲ್ಲ  ಎಲ್ಲರೂ, ಬಿಟ್ಟಿ ಸಲಹೆ ನೀಡುತ್ತಾರೆ. ಆದರೆ ದೇಶದಲ್ಲಿ ಎಷ್ಟೋ ಜನರು ಮಾಸ್ಕ್ ಕೊಳ್ಳಲು ಕೂಡ ಹಣವಿಲ್ಲದ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಹಿರಿ ಜೀವವೊಂದು ಇಡೀ ದೇಶಕ್ಕೆ ತಿಳಿಸಿಕೊಟ್ಟಿದೆ.


Provided by

ಹೌದು ತೆಲಂಗಾಂಣದ ಮೆಹಬೂಬ್ ನಗರ ನಿವಾಸಿಯೊಬ್ಬರು ಸರ್ಕಾರಿ ಕಚೇರಿಗೆ ಮಾಸ್ಕ್ ಬದಲು ಗೀಜಗನ ಗೂಡು ಧರಿಸಿ ಬಂದಿದ್ದು, ಎಲ್ಲರ ಹುಬ್ಬೇರಿಸಿದ್ದಾರೆ. ತನ್ನ ಪಿಂಚಣಿ ಹಣ ಪಡೆದುಕೊಳ್ಳಲು  ಮೇಕಲಾ ಕುರ್ಮಯ್ಯ ಎಂಬವರು ಮಾಸ್ಕ್ ಬದಲು ಗೀಜಗನ ಗೂಡು ಧರಿಸಿ ಬಂದಿದ್ದಾರೆ.

ತನ್ನ ಬಳಿಯಲ್ಲಿ ಮಾಸ್ಕ್ ಕೊಳ್ಳಲು ಹಣವಿಲ್ಲ.  ಹಾಗಾಗಿ ಗೀಜಗನ ಗೂಡು ಧರಿಸಿ ಬಂದಿರುವುದಾಗಿ ವೃದ್ಧ ಹೇಳಿದ್ದಾರೆ. ತೆಲಂಗಾಣದಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಅಲ್ಲದೇ ಮಾಸ್ಕ್ ಧರಿಸದೇ ಬರುವವರಿಗೆ ಯಾವುದೇ ಕಚೇರಿಗೆ ಪ್ರವೇಶಿಸಲು ಕೂಡ ಬಿಡುವುದಿಲ್ಲ.

ಇತ್ತೀಚಿನ ಸುದ್ದಿ