ಮೆರವಣಿಗೆಯ ಮೇಲೆ ಬಿದ್ದ ಆಳದ ಮರ | ಇಬ್ಬರು ಸಾವು, 25 ಮಂದಿಗೆ ಗಾಯ - Mahanayaka
10:40 PM Wednesday 20 - August 2025

ಮೆರವಣಿಗೆಯ ಮೇಲೆ ಬಿದ್ದ ಆಳದ ಮರ | ಇಬ್ಬರು ಸಾವು, 25 ಮಂದಿಗೆ ಗಾಯ

thrissur
24/04/2021


Provided by

ತ್ರಿಶೂರ್: ತ್ರಿಶೂರ್‌ ಪೂರಂನ ಪ್ರಯುಕ್ತ ಮದತಿಲ್‌‌ ಮೆರವಣಿಗೆಯಲ್ಲಿ ಭಕ್ತರು ಹಾಗೂ ತಾಳವಾದ್ಯ ಕಲಾವಿದರು ಸಾಗುತ್ತಿದ್ದ ಸಂದರ್ಭ ಭಾರೀ ಆಲದ ಮರವೊಂದರ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ತಿರುವಂಬಡಿ ದೇವಾಲಯ ಪೂರಂನ ಸಂಘಟನಾ ಸಮಿತಿ ಸದಸ್ಯರಾದ ರಮೇಶ್‌ ಹಾಗೂ ರಾಧಾಕೃಷ್ಣನ್‌ ಮೃತಪಟ್ಟವರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಏಳು ಮಂದಿಯನ್ನು ತ್ರಿಶೂರು ವೈದ್ಯಕೀಯ ಆಸ್ಪತ್ರೆಗೆ ಹಾಗೂ ಉಳಿದ 28 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ ಇಂದು ನಡೆಯಬೇಕಿದ್ದ ಭವ್ಯ ಪಟಾಕಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಪ್ರದರ್ಶನಕ್ಕೆಂದು ಇಟ್ಟಿದ್ದ ಪಟಾಕಿಗಳನ್ನು ಇಂದು ಬೆಳಗ್ಗಿನ ಜಾವ ನಾಶಪಡಿಸಲಾಯಿತು. ಸಾಂಪ್ರದಾಯಿಕವಾಗಿ ಒಂದು ಆನೆಯ ಪಕಲಮೂರಮ್‌‌ ಮೆರವಣಿಗೆ ನಡೆಸಲಾಗುತ್ತದೆ ಎಂದು ದೇವಸ್ಥಾನದ ಮಂಡಳಿ ಹೇಳಿದೆ.

ಇತ್ತೀಚಿನ ಸುದ್ದಿ